ದೊಡ್ಮನೆಯ ಕುಡಿ ಯುವ ರಾಜಕುಮಾರ (Yuva Rajkumar) ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ಯುವನ ಹೊಸ ಸಿನಿಮಾ ಬಗ್ಗೆ ನಾನಾ ವಿಚಾರಗಳು ಸದ್ದು ಮಾಡ್ತಿದೆ. ಯುವಗೆ ಜೋಡಿಯಾಗಲು ನಟಿ ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan)ಎಂಟ್ರಿ ಕೊಡ್ತಿದ್ದಾರೆ.ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಹೊಸ ಸಿನಿಮಾದಲ್ಲಿ‌  ಯುವರಾಜ್‌ಕುಮಾರ್ ನಟಿಸಲು ರೆಡಿಯಾಗಿದ್ದಾರೆ. ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಯುವ ಕಾಲಿಡುತ್ತಿದ್ದಾರೆ. ಯುವನ ಡೆಬ್ಯೂ ಸಿನಿಮಾ ಬಗ್ಗೆ ಸಾಕಷ್ಟು ಕ್ಯೂರಿಯಸ್ ಆಗಿರುವ ಅಭಿಮಾನಿಗಳಿಗೆ ಮತ್ತೊಂದು ನ್ಯೂಸ್ ಸಿಕ್ಕಿದೆ. ದೊಡ್ಮನೆ ಯುವನಿಗೆ ಸೌತ್ ನಟಿ ಜೋಡಿಯಾಗುತ್ತಿದ್ದಾರೆ. ಇದನ್ನೂ ಓದಿ: ಯಾಕೆ ವಿಜಯ್ ಮರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ: ತಮನ್ನಾಗೆ ನೆಟ್ಟಿಗರಿಂದ ಕ್ಲಾಸ್ತೆಲುಗು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಕಲ್ಯಾಣಿ, ಈಗ ಸ್ಯಾಂಡಲ್‌ವುಡ್‌ಗೆ (Sandalwood) ಯುವನ ಹೊಸ ಚಿತ್ರದ ಮೂಲಕ ಪಾದಾರ್ಪಣೆ ಮಾಡ್ತಿದ್ದಾರೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.  A post shared by Kalyani Priyadarshan (@kalyanipriyadarshan)ಇನ್ನೂ ಯುವರಾಜಕುಮಾರ್‌ಗೆ ಸಂತೋಷ್ ಆನಂದ್‌ರಾಮ್ (Santhosh Anandram) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದೇ ಏಪ್ರಿಲ್‌ನಿಂದ ಶೂಟಿಂಗ್ ಶುರುವಾಗಲಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


