ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ (Santro Ravi) ಎಂಬಾತನ ವಿಚಾರದಲ್ಲಿ ರಾಡಿ ಎದ್ದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಫೋಟೋ, ವಿಡಿಯೋ ಸಮರ ಶುರುವಾಗಿದೆ. ಮೈಸೂರಿನಲ್ಲಿ ಓಡಾಡಿಕೊಂಡಿದ್ದ ಈ ರೌಡಿಶೀಟರ್ ರವಿ ಬೆಂಗಳೂರಿಗೆ ಬಂದಿದ್ದೇ ಒಂದು ರೋಚಕ ಕಹಾನಿ.ಯಾರು ಈ ಸ್ಯಾಂಟ್ರೋ ರವಿ?
ಸ್ಯಾಂಟ್ರೋ ರವಿಯ ಮೂಲ ಹೆಸರು ಮಂಜುನಾಥ್. ಮಂಡ್ಯ (Mandya) ಮೂಲದ ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೋ ರವಿ ಸಂಪ್ರದಾಯಬದ್ಧ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ. ರವಿ ತಂದೆ ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದರು.ತಂದೆಯ ಮರಣದ ನಂತರ ಮಂಜುನಾಥ್ ಅಡ್ಡದಾರಿ ಹಿಡಿದಿದ್ದ. ಹೆತ್ತ ತಾಯಿ ಹಾಗೂ ಸಹೋದರರಿಗೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದ ಈತ ಪುಡಿರೌಡಿಗಳ ಜೊತೆ ಸೇರಿ ಅಸಭ್ಯ ವರ್ತನೆ ಎಸಗುತ್ತಿದ್ದ .2000 ಇಸವಿಯಿಂದಲೇ ಪಿಂಪ್ ದಂಧೆ ಮಾಡುತ್ತಿದ್ದ ರವಿ ಮಂಡ್ಯ ಪೊಲೀಸರು ಕೊಟ್ಟ ಏಟಿಗೆ ಮಂಡ್ಯ ಬಿಟ್ಟು ಮೈಸೂರು ಸೇರಿಕೊಂಡ. ಇದನ್ನೂ ಓದಿ: ಹೆಚ್‌ಡಿಕೆ ಜೊತೆಗೆ ಸ್ಯಾಂಟ್ರೋ ರವಿ ಸಂಪರ್ಕ ಹೇಗೆ ಎಂಬುದು ಗೊತ್ತಾಗಬೇಕು- ಆರಗ ಜ್ಞಾನೇಂದ್ರಮೈಸೂರಿನಲ್ಲಿ ಏನು ಮಾಡುತ್ತಿದ್ದ?
ಮೈಸೂರಿನಲ್ಲಿ (Mysuru) ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಸರಸ್ವತಿಪುರಂ ಸುತ್ತಮುತ್ತ ಪಿಂಪ್ ಕೆಲಸ ಮಾಡುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲೇ (Santro Car) ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ದಂಧೆ ಮಾಡುತ್ತಿದ್ದರಿಂದ ʼಸ್ಯಾಂಟ್ರೋ ರವಿʼ ಎಂಬ ಹೆಸರು ಬಂತು. ಬಳಿಕ ಪಿಂಪ್ ರವಿ, ಸ್ಯಾಂಟ್ರೋ ರವಿ ಎಂದೇ ಫೇಮಸ್ ಆಗಿದ್ದ. ಆ ಸ್ಯಾಂಟ್ರೋ ಕಾರಿನಿಂದಲೇ ರವಿ ಅದೃಷ್ಟ ಖುಲಾಯಿಸಿ ರಾಜಕಾರಣಿಗಳ ಸ್ನೇಹ ಬೆಳೆಸಿಕೊಂಡ.ಕುಮಾರಕೃಪಾದಲ್ಲಿ ವಾಸ:
ಮೈಸೂರಿನ ಗಲ್ಲಿ ಗಲ್ಲಿ ಅಲೆಯುತ್ತಿದ್ದ ಸ್ಯಾಂಟ್ರೋ ರವಿ ಬೆಂಗಳೂರಿಗೆ ಬಂದ ಬಳಿಕ ರಾಜಕಾರಣಿಗಳ ಸ್ನೇಹ ಬೆಳೆಸಿದ. ತನ್ನ ಪಿಂಪ್ ವ್ಯವಹಾರಕ್ಕೆ ರಾಜಕಾರಣಿಗಳ ಶ್ರೀರಕ್ಷೆ, ಕೃಪಾಕಟಾಕ್ಷ ಪಡೆದುಕೊಂಡ. ಪಿಂಪ್ ಕೆಲಸ ಗೊತ್ತಾಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಅತಿಥಿ ಗೃಹವನ್ನೇ ಕುಮಾರ ಕೃಪಾ ಗೆಸ್ಟ್ (Kumara Krupa) ಹೌಸ್ ಅನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ. ಗೆಸ್ಟ್‌ ಹೌಸ್‌ನಲ್ಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಭೇಟಿ ಮಾಡುತ್ತಿದ್ದ ರವಿ ಖಾಯಂ ಆಗಿ ಅಲ್ಲಿಯೇ ನೆಲೆಸಿದ್ದ. ಇದರಿಂದಾಗಿ ಆತನಿಗೆ ತನ್ನ ವ್ಯವಹಾರ ನಡೆಸುವುದಕ್ಕೆ ಸುಲಭ ಆಗಿತ್ತು. ಈತನ ದಂಧೆ ಬಗ್ಗೆ ಯಾರಿಗೂ ಅನುಮಾನವೇ ಬರುತ್ತಿರಲಿಲ್ಲ. ವರ್ಗಾವಣೆ ದಂಧೆಯನ್ನು ಕೂಡ ತುಂಬಾ ಚೆನ್ನಾಗಿ ನಡೆಸಬಹುದಾಗಿತ್ತು. ಅದಕ್ಕಾಗಿಯೇ ಕುಮಾರಕೃಪಾ ಗೆಸ್ಟ್‌ ಹೌಸ್‌ ಖಾಯಂ ಜಾಗವಾಗಿ ಹೋಗಿತ್ತು.ಪತ್ನಿ ಹೇಳಿದ್ದೇನು?
ಸ್ಯಾಂಟ್ರೋ ರವಿ ಪಿಂಪ್ ಆಗಿದ್ದ ಎನ್ನುವುದಕ್ಕೆ ಪತ್ನಿಯೇ ಸಾಕ್ಷಿ ಹೇಳಿದ್ದಾರೆ. ಕೆಲಸ ಹುಡುಕುತ್ತಿದ್ದ ನಾನು ಮಂಜುನಾಥ್‌ನನ್ನು ಭೇಟಿಯಾದೆ. ಕೆಲಸ ಕೊಡಿಸಿದ ಬಳಿಕ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದ. ಪೊಲೀಸರಿಗೆ ದೂರು ಕೊಟ್ಟರೆ ನಿನ್ನ ನಗ್ನ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದ ಎಂಬುದಾಗಿ ಪತ್ನಿ ಸ್ಫೋಟಕ ಸತ್ಯ ಹೇಳಿದ್ದಾರೆ. ಅಲ್ಲದೇ ಇತರರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ದೈಹಿಕವಾಗಿ ಹಲ್ಲೆ, ಕಿರುಕುಳ ನೀಡಿ ನನ್ನ ಮೇಲೆಯೇ ಕ್ರಿಮಿನಲ್‌ ಕೇಸ್‌ ಹಾಕಿದ್ದಾನೆ ಎಂದು ಎಂದು ಆರೋಪಿಸಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


