ಬೆಂಗಳೂರು: ಸ್ಯಾಂಟ್ರೋ ರವಿ (Santro Ravi) ಪ್ರಕರಣದ ಬಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ (Dinesh Gundu Rao) ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸ್ಯಾಂಟ್ರೋ ರವಿ ಎಂಬ ಪಿಂಪ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾನೆ. ಈ ಸರ್ಕಾರದಲ್ಲಿ ತಲೆ ಹಿಡುಕನೊಬ್ಬ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವಷ್ಟು ಪ್ರಭಾವಿಯೇ? ಗೃಹಮಂತ್ರಿ ಜ್ಞಾನೇಂದ್ರ (Araga Jnanendra) ಅವರೇ ತಲೆಹಿಡುಕ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು? ನಿಮ್ಮ ಗಮನಕ್ಕೆ ಬಾರದೆ ವರ್ಗಾವಣೆ ನಡೆಸಲು ಸಾಧ್ಯವೇ? ತಲೆಹಿಡುಕ ಸ್ಯಾಂಟ್ರೋ ರವಿ ವರ್ಗಾವಣೆ ಸಂಬಂಧ ಹಲವು ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿರುವ ಆಡಿಯೋ ರಿಲೀಸ್ ಆಗಿದೆ ಎಂದರು.1
‘ಸ್ಯಾಂಟ್ರೋ ರವಿ’ ಎಂಬ ಪಿಂಪ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾನೆ.ಈ ಸರ್ಕಾರದಲ್ಲಿ ‘ತಲೆ ಹಿಡುಕ’ನೊಬ್ಬ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವಷ್ಟು ಪ್ರಭಾವಿಯೇ?ಗೃಹಮಂತ್ರಿ ಜ್ಞಾನೇಂದ್ರರವರೆ ತಲೆಹಿಡುಕ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು?ನಿಮ್ಮ ಗಮನಕ್ಕೆ ಬಾರದೆ ವರ್ಗಾವಣೆ ನಡೆಸಲು ಸಾಧ್ಯವೇ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 7, 2023ಆ ಆಡಿಯೋದಲ್ಲಿ ಬೊಮ್ಮಾಯಿ (Basavaraj Bommai) ಅವರೇ ನನಗೆ ಸರ್ ಎನ್ನುತ್ತಾರೆ, ನೀವು ನನಗೆ ಸರ್ ಎನ್ನಬೇಕು ಎಂದು ಡಿವೈಎಸ್‌ಪಿಯೊಬ್ಬರಿಗೆ ಧಮಕಿ ಹಾಕಿದ್ದಾನೆ. ಈ ಸರ್ಕಾರದ ಪ್ರಭಾವಿಗಳ ರಕ್ಷಣೆಯಿಲ್ಲದೆ ಅಧಿಕಾರಿಗೆ ಧಮಕಿ ಹಾಕಲು ಸ್ಯಾಂಟ್ರೋ ರವಿಗೆ ಸಾಧ್ಯವೇ? ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟ್ರೋ ರವಿ ಜೊತೆ ಬಿಜೆಪಿಯ (BJP) ಹಲವು ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ ತಿಂದು ಕಾಸರಗೋಡು ಯುವತಿ ಸಾವು3
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟ್ರೋ ರವಿ ಜೊತೆ #BJP ಯ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ.BJPಯವರು ವಿಶೇಷವಾಗಿ ತಲೆಹಿಡುಕರ ಸಂಗ ಯಾಕೆ ಬೆಳೆಸುತ್ತಾರೋ ಅರ್ಥವಾಗುತ್ತಿಲ್ಲ?BJPಯವರು ತಲೆಹಿಡುಕರ ಸಂಗ ಬೆಳೆಸುವ ಹಿಂದಿನ ಮರ್ಮವೇನು?ಉತ್ತರಿಸುವಿರಾ ಬೊಮ್ಮಾಯಿಯವರೇ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 7, 2023ಬಿಜೆಪಿಯವರು ವಿಶೇಷವಾಗಿ ತಲೆಹಿಡುಕರ ಸಂಗ ಯಾಕೆ ಬೆಳೆಸುತ್ತಾರೋ ಅರ್ಥವಾಗುತ್ತಿಲ್ಲ? ಬಿಜೆಪಿಯವರು ತಲೆಹಿಡುಕರ ಸಂಗ ಬೆಳೆಸುವ ಹಿಂದಿನ ಮರ್ಮವೇನು? ಉತ್ತರಿಸುವಿರಾ ಬೊಮ್ಮಾಯಿಯವರೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿ‌ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯತ್ನಾಳ್ ಕಾಲು ಹಿಡಿದು ಭೇಟಿಗೆ ಸಮಯ ಕೇಳಿದ ರಮೇಶ್ ಜಿಗಜಿಣಗಿ ಅಣ್ಣ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


