ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಅಂದ್ರೆ ಹಾವು, ಮುಂಗುಸಿ ಇದ್ದಂತೆ ಇರುತ್ತಾರೆ. ಅಂಥದ್ರಲ್ಲಿ ರಮೇಶ್ ಜಿಗಜಿಣಗಿ ಸ್ವಂತ ಅಣ್ಣ ಸಿದ್ರಾಮ ಜಿಗಜಿಣಗಿ (Sidrama Jigajinagi) ಅವರು ನಡುರಸ್ತೆಯಲ್ಲೆ ಯತ್ನಾಳ್ ಕಾಲು ಹಿಡಿದು ಭೇಟಿಗೆ ಸಮಯ ಕೇಳಿರುವುದು ಅಚ್ಚರಿ ಮೂಡಿಸಿದೆ.ವಿಜಯಪುರದ ವಾಟರ್ ಟ್ಯಾಂಕ್ ಬಳಿ ಈ ಘಟನೆ ನಡೆದಿದೆ. ಕಾಲು ಮುಗಿದು ಭೇಟಿಗೆ ಸಮಯ ಕೇಳಿದ ಸಿದ್ರಾಮ ಜಿಗಜಿಣಗಿ ಅವರಿಗೆ ಸಂಜೆ 5:30 ಕ್ಕೆ ಭೇಟಿಗೆ ಕಛೇರಿಗೆ ಬರುವಂತೆ ಯತ್ನಾಳ್ ಸೂಚಿಸಿದ್ದಾರೆ. ಇದನ್ನೂ ಓದಿ:   ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಚಿವರಿಂದ ಸ್ಥಳ ಪರಿಶೀಲನೆಇತ್ತ ತನ್ನ ಹಿಂಬಾಲಕರ ಜೊತೆ ಮಾತನಾಡುತ್ತಾ, ಇವರ ಅಣ್ಣ ಇವರದ್ದೇ 5 ಎಕರೆ ಜಮೀನು ಕಬಳಿಸಿದ್ದು, ಇವರು ಇವರು ಸಂಸದ ರಮೇಶ ಜಿಗಜಿಣಗಿ ಅಣ್ಣ ಅಂತಾ ಹೇಳಿದರು.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


