ಬೆಳಗಾವಿ: ಹಿಂದೂಪರ ಸಂಘಟನೆ ಮುಖಂಡನ (Hindu Organisation Leader) ಮೇಲೆ ಫೈರಿಂಗ್ (Firing) ಆಗಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನಡೆದಿದ್ದು, ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಹಾನಿ ಸಂಭವಿಸಿಲ್ಲ.ತಾಲೂಕಿನ ಹಿಂಡಲಗಾ ಗ್ರಾಮದ ಶ್ರೀರಾಮಸೇನೆ (Sriram Sena) ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಫೈರಿಂಗ್ ಆಗಿದ್ದು, ಅದೃಷ್ಟವಶಾತ್ ರವಿ ಮತ್ತು ಚಾಲಕ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಇದನ್ನೂ ಓದಿ: ಅಸಲಿ ಚಿನ್ನವನ್ನು ನಕಲಿ ಎಂದು ಭಾವಿಸಿ ಕಸದ ರಾಶಿಗೆ ಎಸೆದ ಕಳ್ಳರುಶನಿವಾರ ಸಂಜೆ ವಾಹನದಲ್ಲಿ ಚಲಿಸುತ್ತಿದ್ದ ಅಪರಿಚಿತರಿಂದ, ರವಿ ವಾಹನದ ಮೇಲೆ ಫೈರಿಂಗ್ ಮಾಡಲಾಗಿದೆ. ರವಿ ಕೋಕಿತಕರ್ ಗಡ್ಡಕ್ಕೆ ಬುಲೆಟ್ ತಗುಲಿ ಚಾಲಕನ ಕೈಗೆ ತಗುಲಿದೆ. ಚಾಲಕನ ಕೈಯಲ್ಲಿ ಬುಲೆಟ್ ಸಿಕ್ಕಿದ್ದು ಸದ್ಯ ಗಾಯಾಳುಗಳನ್ನ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹಿಂದೂಪರ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ‌ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಸಹೋದರನ ಮೇಲೆ ಗುಂಡಿನ ದಾಳಿಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಫೈರಿಂಗ್ ಮಾಡಿದ ಆರೋಪಿಗಳ ಪತ್ತೆಗೆ ನಾಲ್ಕು ಪ್ರತ್ಯೇಕ ತಂಡಗಳ ರಚನೆ ಮಾಡಲಾಗಿದೆ ‌ಎಂದು ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


