ಧಾರವಾಡ: ಕಳಸಾ ಬಂಡೂರಿಗೆ ಇನ್ನೂ 60 ದಿನಗಳಲ್ಲಿ ಒಂದು ಒಳ್ಳೆ ಸಿಹಿ‌ ಸುದ್ದಿ‌ ಕೊಡುತ್ತೇವೆ ಎಂದು ಸಚಿವ ಶಂಕರ್‌ ಪಾಟೀಲ್ ಮುನೇನಕೊಪ್ಪ (Shankar Patil Munenakoppa) ತಿಳಿಸಿದರು.ಕಾಂಗ್ರೆಸ್‌ನಿಂದ ಕಳೆದ ವಾರವಷ್ಟೇ ಹುಬ್ಬಳ್ಳಿಯಲ್ಲಿ ಮಹದಾಯಿ ಬಗ್ಗೆ ಸಮಾವೇಶ ಮಾಡಲಾಗಿತ್ತು. ಈ‌ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯಿಸಿ, ಕಳಸಾ ಬಂಡೂರಿಗೆ (Kalasa Banduri) ಕಾಂಗ್ರೆಸ್ (Congress) ವಿರೋಧ ಮಾಡುತ್ತಲೇ ಬಂದಿದೆ. ಈ ಹಿಂದೆ ಕಳಸಾ‌ ಬಂಡೂರಿಗೆ ಒಂದು ಹನಿ ನೀರು ಬಿಡಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಳಸಾ‌ ಬಂಡೂರಿ ಬಗ್ಗೆ ಮಾತನಾಡುವಂತದ್ದು‌ ಹಾಗೂ ಸಮಾವೇಶ ಮಾಡುವಂತ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ತಿಳಿಸಿದರು.ಟ್ರಿಬ್ಯುನಲ್ ಸರಿ ಪಡಿಸುವ ಕೆಲಸ ಅವರಿಂದ ಯಾವತ್ತೂ ಆಗಿಲ್ಲ. ರೈತರ ಮೇಲೆ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ಮಾಡಿದ್ದು ಕಾಂಗ್ರೆಸ್, ನಾನು ಅದೇ ಭಾಗದಲ್ಲಿ ಹುಟ್ಟಿದ್ದೇನೆ. ನಾವು ಹೋರಾಟದಿಂದ ನೀರು ಪಡೆಯುವಂತಹ ಪರಿಸ್ಥಿತಿ ಬಂದಿದೆ. ನಮ್ಮ ಭಾಗದ ಅನೇಕ ರೈತರಿಗೆ ಚಿತ್ರದುರ್ಗ ಹಾಗೂ ಬಳ್ಳಾರಿ ಜೈಲಿಗೆ ಹಾಕುವಂತೆ ಆಯಿತು, ಹೀಗಾಗಿ ಕಾಂಗ್ರೆಸ್‌ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.ಕಾಂಗ್ರೆಸ್‌ನವರು ಹುಬ್ಬಳ್ಳಿ ನೆಹರು ಮೈದಾನದಲ್ಲಿ ಸಮಾವೇಶ ಮಾಡಿದ್ದು, ಚುನಾವಣೆ ಸಮಾವೇಶ ಅಷ್ಟೇ ಎಂದ ಅವರು, ಮಹದಾಯಿ ವಿಚಾರವಾಗಿ ಗೋವಾ‌ ಸಚಿವ ರಾಜೀನಾಮೆ ನೀಡುವ ವಿಚಾರವಾಗಿ ನಾನು ಮಾತನಾಡಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯ 20 ಶಾಸಕರಿಗೆ ಟಿಕೆಟ್ ಟೆನ್ಷನ್ – ಹೈಕಮಾಂಡ್ ಕೈ ಸೇರಿದೆ 16 ಜಿಲ್ಲೆಗಳ ಶಾರ್ಟ್ ಲಿಸ್ಟ್ಕಾನೂನು ಬದ್ಧವಾಗಿ ಟ್ರಿಬ್ಯುನಲ್‌ನಲ್ಲಿ ಆದೇಶವಾದ 3.9 ಟಿಎಂಸಿ ನೀರು ನಮ್ಮ ಹಕ್ಕು. ಆ‌ ಹಕ್ಕನ್ನು ಪಡೆಯುವ‌ ಕೆಲಸ ಮಾಡುತ್ತೇವೆ.‌ ಗೋವಾ ರಾಜ್ಯ ತಮ್ಮ ನೆಲ‌, ಜಲದ ವಿಚಾರದಲ್ಲಿ ಅವರು ಹೇಳಿದ್ದಾರೆ. ನಮಗೆ ಆಗಲೇ ಅನುಮೋದನೆ ಸಿಕ್ಕಿದೆ. ಆದರೆ ನಾವು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಬೇಗ ಟೆಂಡರ್ ಕರೆದು ಭೂಮಿ ಪೂಜೆ ಮಾಡುವ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಡಿಪಿಆರ್ ಅನುಮೋದನೆ ಸಿಕ್ಕಿದೆ. ಇದಕ್ಕಾಗಿ 60 ವರ್ಷ ಕಾದಿದ್ದೇವೆ. ಇನ್ನೂ 60 ದಿನ ಕಾದರೆ ಇದಕ್ಕೆ ಒಳ್ಳೆ ಸುದ್ದಿಯನ್ನ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


