ಬೆಂಗಳೂರು: ವಿಧಾನಸೌಧದಲ್ಲಿ (Vidhana Soudha) ಪತ್ತೆಯಾದ 10 ಲಕ್ಷ  ರೂ. ಹಣ ನನ್ನದೇ. ನ್ಯಾಯಾಲಯಕ್ಕೆ ಪಾವತಿಸಲು ಆ ಹಣವನ್ನು ಸಂಗ್ರಹಿಸಿದ್ದೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಜಗದೀಶ್‌ (PWD Engineer Jagadish) ತಿಳಿಸಿದ್ದಾರೆ.10 ಲಕ್ಷ ರೂ. ಹಣ ಸಿಕ್ಕಿದ ಪ್ರಕರಣದಲ್ಲಿ ಆರೋಪಿ ಜಗದೀಶ್‌ಗೆ ಜಾಮೀನು (Bail) ಸಿಕ್ಕಿದೆ. ಮೆಯೋಹಾಲ್ ಕೋರ್ಟ್ 1 ರ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದು, ಜಾಮೀನು ಪಡೆದ ಬಳಿಕ ಎಂಜಿನಿಯರ್ ಜಗದೀಶ್ ಹಣದ ಮೂಲದ ಬಗ್ಗೆ ಹೇಳಿಕೆ ನೀಡಿದ್ದಾರೆ.ಜಗದೀಶ್‌ ಹೇಳಿದ್ದು ಏನು?
ಸ್ವಂತ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಚೆಕ್ ಬೌನ್ಸ್ (Cheque Bounce) ಆಗಿದ್ದ ಹಿನ್ನೆಲೆಯಲ್ಲಿ ಕೋರ್ಟ್ (Court) ಮುಖಾಂತರ ದಂಡವಾಗಿ ಹಣವನ್ನು ಪಾವತಿ ಮಾಡಬೇಕಿತ್ತು. ಸಂಬಂಧಿಕರಿಂದ ಹಣವನ್ನು ಸಂಗ್ರಹಿಸಿದ್ದೆ. ಈ ಬಗ್ಗೆ ಎಲ್ಲಾ ದಾಖಲಾತಿಗಳನ್ನು ಪೊಲೀಸರಿಗೆ ಮತ್ತು ನ್ಯಾಯಾಲಯಕ್ಕೆ ಕೊಟ್ಟಿದ್ದೇನೆ. ನಾನು ಮಂಡ್ಯಕ್ಕೆ ಹೋಗಬೇಕಿತ್ತು. ಆಗ ನನಗೆ ವಿಧಾನಸೌಧಕ್ಕೆ ಹೋಗಬೇಕಾಗಿ ಬಂತು.‌ ಇದನ್ನೂ ಓದಿ: ದಶಪಥದಲ್ಲಿ ಬೈಕ್‌ಗಳ ಓಡಾಟಕ್ಕೆ ಅನುಮತಿ ಇಲ್ಲ- ಪ್ರತಾಪ್ ಸಿಂಹಸಂಜೆ 6 ಗಂಟೆಯಾಗಿ ಕತ್ತಲಾಗಿದ್ದರಿಂದ ನಾನು ವಾಪಸ್ ಬಂದೆ.‌ ಆಗ ಪೊಲೀಸರು ಉದ್ಧೇಶಪೂರ್ವಕವಾಗಿ ನನ್ನನ್ನು ತಪಾಸಣೆ ಮಾಡಿದಾಗ ಹಣ ಸಿಕ್ಕಿದೆ. ಕಾರು ತೆಗೆದುಕೊಂಡು ಹೋಗಿದ್ದರೆ ಅದರಲ್ಲಿಯೇ ಇಡುತ್ತಿದ್ದೆ. ಆದರೆ ಹಣದ ರಕ್ಷಣೆಗಾಗಿ ಕೈಯಲ್ಲೇ ಇಟ್ಟುಕೊಂಡಿದ್ದೆ. ಕೆಲವರು ಇದರ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ.‌ ಇದು ನನ್ನು ಸ್ವಂತ ಹಣ ಆಗಿರುವುದರಿಂದ ಇದರಲ್ಲಿ ಅರೆಸ್ಟ್ ಏನು ಬರುವುದಿಲ್ಲ. ತಕ್ಷಣವೇ ನನ್ನನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.ಮಾಧ್ಯಮದಲ್ಲಿಯೂ ಸಹ ಸಿಕ್ಕಾಪಟ್ಟೆ ಪ್ರಚಾರ ಆಗಿದೆ. ಆ ಹಣವನ್ನು ನಾನು ವಾಪಸ್ ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ರಾಜಕೀಯ ಅದು ಇದು ಆರೋಪ ಕೇಳಿ ಬಂತು.‌ ಹೀಗಾಗಿ ನನಗೂ ಸಹ ತುಂಬಾ ನೋವಾಗಿದೆ. ಎಲ್ಲಾ ದಾಖಲಾತಿಗಳನ್ನು ನಾನು ಮರು ದಿನವೇ ಕೊಟ್ಟಿದ್ದೇನೆ. ಮೂರನೇ ಮಹಡಿಯಲ್ಲಿ ನಮ್ಮ ಆಫೀಸ್ ಬಿಲ್ಡಿಂಗ್ ಇದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


