ಬೀದರ್: ದಶಕದ ಬಳಿಕ ಇಂದಿನಿಂದ ಮೂರು ದಿನಗಳ ಕಾಲ ಗಡಿ ಜಿಲ್ಲೆ ಬೀದರ್ (Bidar Utsav) ನಲ್ಲಿ ಐತಿಹಾಸಿಕ ಬೀದರ್ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಐತಿಹಾಸಿಕ ಬೀದರ್ ಕೋಟೆ ಸಾಕ್ಷಿಯಾಗಲಿದೆ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar), ಕಿಚ್ಚ ಸುದೀಪ್ (Kichcha Sudeepa) ಸೇರಿದಂತೆ ಖ್ಯಾತ ನಟರು ಹಾಗೂ ವಿಜಯ್ ಪ್ರಕಾಶ್, ಮಂಗಲಿ, ಅನುರಾಧಾ ಭಟ್, ಕುಮಾರಸಾನು, ಸಾಬರಿ ಬ್ರದರ್ಸ್ ಸೇರಿದಂತೆ ಖ್ಯಾತ ಗಾಯಕರು ಮೂರು ದಿನಗಳ ಕಾಲ ಸಂಗೀತ ಸಂಜೆಯ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.ಐತಿಹಾಸಿಕ ಕೋಟೆಯಲ್ಲಿ 20 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಬೀದರ್ ಉತ್ಸವದಲ್ಲಿ ಸುಮಾರು ಪ್ರತಿದಿನ 50 ಸಾವಿರ ಜನ್ರು ಸೇರುವ ನಿರೀಕ್ಷೆ ಇದೆ. ಜೊತೆಗೆ ಬೋಟಿಂಗ್ ಉತ್ಸವ, ಸಿಡಿಮದ್ದು ಉತ್ಸವ, ಗಾಳಿಪಟ ಉತ್ಸವ, ಹೆಲಿಕ್ಯಾಪ್ಟರ್ ಸಂಚಾರ ಉತ್ಸವ ಸೇರಿದಂತೆ 20ಕ್ಕೂ ಅಧಿಕ ಉತ್ಸವಗಳು ನಡೆಯಲಿವೆ. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶಇಂದು ಸಂಜೆ 5:30ಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ (Kishan Reddy) ಬೀದರ್ ಉತ್ಸವ ಉದ್ಘಾಟನೆ ಮಾಡಲಿದ್ದು ರಾತ್ರಿ 8 ಗಂಟೆಗೆ ಸಜೀತ್ ಹೆಗಡೆ, ಆಸೀಸ್ ಕೌರ್, ಸಾಬರಿ ಬ್ರದರ್ಸ್ ರಿಂದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ ನಡೆಲಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


