ಚಿಕ್ಕಬಳ್ಳಾಪುರ: ಯುವಕನೋರ್ವ ಪ್ರೀತಿ (Love) ಮಾಡುವಂತೆ ಟಾರ್ಚರ್‌ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.ದೊಡ್ಡಬಳ್ಳಾಪುರ ತಾಲೂಕಿನ ಮಲ್ಲತಹಳ್ಳಿ ನಿವಾಸಿ ಚೈತ್ರಾ (22) ಮೃತ ಪದವೀಧರೆ ಹಾಗೂ ಇದೇ ತಾಲೂಕಿನ ವಡ್ಡರಹಳ್ಳಿ ಪಾಳ್ಯದ ಯುವಕ (Youth) ಕುಮಾರಸ್ವಾಮಿ ಬಂಧಿತ ಆರೋಪಿ. ಕುಮಾರಸ್ವಾಮಿ ಪ್ರತಿದಿನ ಕಾಲ್‌, ಮೆಸೆಜ್‌ ಮಾಡಿ ಚೈತ್ರಾಳಿಗೆ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ. ಅಷ್ಟೇ ಅಲ್ಲದೇ ಆಕೆಯನ್ನು ಫಾಲೋ ಮಾಡುವುದು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡುವುದು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಮನನೊಂದು ಚೈತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಮೃತ ಚೈತ್ರಾ ಪೋಷಕರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ದೂರಿನಲ್ಲಿ ಕಳೆದ 4 ವರ್ಷಗಳಿಂದಲೂ ನನ್ನ ಲವ್ ಮಾಡು, ನಾನು ನಿನ್ನ ಮದುವೆ ಆಗುತ್ತೇನೆ ಎಂದು ಕಾಡುತ್ತಿದ್ದ. ಕೆಲಸಕ್ಕೆ ಹೋಗುವಾಗ ಬರುವಾಗ ಫಾಲೋ ಮಾಡೋದು ಮಾಡಿ ಕೊಡಬಾರದ ಕಾಟ ಕೊಡ್ತಿದ್ದನಂತೆ. ಇದರಿಂದಲೇ ತಮ್ಮ ಮಗಳು ಮನನೊಂದು ಮನೆಯಲ್ಲಿ ನೇಣು‌ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:  ದಶಕದ ಬಳಿಕ ಇಂದಿನಿಂದ 3 ದಿನಗಳ ಕಾಲ ಐತಿಹಾಸಿಕ ಬೀದರ್ ಉತ್ಸವಇತ್ತ ಯುವತಿ ಚೈತ್ರಾ ಪೋಷಕರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿ ಕುಮಾರಸ್ವಾಮಿಯನ್ನು ಬಂಧಿಸಿದ್ದಾರೆ. ಇನ್ನೂ ಪೊಲೀಸರ ಬಳಿ ಆರೋಪಿ ಕುಮಾರಸ್ವಾಮಿ, ಯುವತಿ ಚೈತ್ರಾ ಹಾಗೂ ತಾನು ಇಬ್ಬರ ಪರಸ್ಪರ ಪ್ರೀತಿ ಮಾಡುತ್ತಿದ್ದೇವು. ಆದರೆ ಅಂತರ್ಜಾತಿ ಕಾರಣ ಅವರ ಮನೆಯಲ್ಲಿ ಒಪ್ಪಲಿಲ್ಲ. ಇದರಿಂದ ಅವರ ನನ್ನ ಮಧ್ಯೆ ವೈಮನಸ್ಸು ಮೂಡಿ ಗಲಾಟೆ ನಡೆದಿದೆ. ಇದರಿಂದಲೇ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೆ BMTC ವಿಸ್ತರಣೆ – ತಕರಾರೆತ್ತಿದ KSRTC
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


