ಬೆಂಗಳೂರು: ನಗರದಲ್ಲಿರುವ ರಸ್ತೆ (Road) ಗುಂಡಿ (Potholes) ಮುಕ್ತ ನಗರ ಅಂತಾ ಘೋಷಣೆ ಮಾಡಲು ಬಿಬಿಎಂಪಿ (BBMP) ಸಿದ್ಧತೆ ಮಾಡಿತ್ತು. ಆದರೆ ಈಗ ಬೆಂಗಳೂರು ಗುಂಡಿ ಮುಕ್ತ ಆಗಿಲ್ಲ ಅಂತಾ ಪಾಲಿಕೆ ಒಪ್ಪಿಕೊಂಡಿದೆ. ರಸ್ತೆ ಗುಂಡಿ ಮುಚ್ಚಲು ಜಲ್ಲಿ ಕೊರತೆ ಇದೆ ಎಂದು ಉತ್ತರಿಸಿದೆ.ರಾಜಧಾನಿ ಬೆಂಗಳೂರಿಗೆ (Bengaluru) ಗುಂಡಿ ಮುಕ್ತಿ ಅದ್ಯಾವಾಗ ಆಗುತ್ತೋ? ವಾಹನ ಸವಾರರು ಭಯವಿಲ್ಲದೇ ಪ್ರಯಾಣ ಮಾಡುವ ಕಾಲ ಅದ್ಯಾವಾಗ ಬರುತ್ತೋ, ಇನ್ನೂ ಅದೆಷ್ಟು ಮಂದಿ ಜೀವತೆತ್ತ ಮೇಲೆ ಬಿಬಿಎಂಪಿ ಬುದ್ಧಿ ಕಲಿಯುತ್ತೋ ಗೊತ್ತಿಲ್ಲ. ಯಾಕಂದ್ರೆ, ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳಿಗೆ ಮುಕ್ತಿ ಕಾಣುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹೊಸ ವರ್ಷಕ್ಕೆ ಬೆಂಗಳೂರಲ್ಲಿ ಇರುವ ಎಲ್ಲಾ ಗುಂಡಿಗಳನ್ನು ಮುಚ್ಚಿ ಗುಂಡಿ ಮುಕ್ತ ನಗರ ಅಂತಾ ಘೋಷಣೆ ಮಾಡೋದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಗಡುವು ನೀಡಿದ್ರು. ಆದರೆ ಬೆಂಗಳೂರು ಇನ್ನೂ ಗುಂಡಿ ಮುಕ್ತ ನಗರ ಆಗಿಲ್ಲ ಅಂತಾ ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಕಾರಣ ಇಲ್ಲ ಸಲ್ಲದ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವುದು ಇನ್ನೂ ಬಾಕಿ ಇದೆ. ಆದ್ರೆ, ರಸ್ತೆ ಗುಂಡಿ ಮುಚ್ಚುವುದಕ್ಕೆ ತಡವಾಗ್ತಿದೆ. ಇದಕ್ಕೆ ಕಾರಣ ಜಲ್ಲಿ ಕಲ್ಲು ಕೊರತೆಯಂತೆ. ಕ್ವಾರಿ ಮತ್ತು ಕ್ರಷರ್ ಪ್ರತಿಭಟನೆಯಿಂದ ಕಳೆದ 15 ದಿನಗಳಿಂದ ಜಲ್ಲಿ, ಕಲ್ಲು ಪೂರೈಕೆ ಆಗುತ್ತಿಲ್ಲ. ಹಾಗಾಗಿ ರಸ್ತೆ ಗುಂಡಿ ಮುಚ್ಚುವುದಕ್ಕೆ ತಡ ಆಗ್ತಾ ಇದೆ ಎಂದು ಪಾಲಿಕೆಯ ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಿಟ್ & ರನ್‍ಗೆ ಮಹಿಳೆಯರಿಬ್ಬರು ಬಲಿ- ಮೂವರ ಸ್ಥಿತಿ ಗಂಭೀರಇತ್ತ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‍ನಲ್ಲಿ (Fixmy Street App) ರಸ್ತೆ ಗುಂಡಿಗಳ ದೂರುಗಳ ಸುರಿಮಳೆಯೇ ಆಗ್ತಿದೆ. ಫಿಕ್ಸ್ ಮೈ ಸ್ಟ್ರೀಟ್‍ನಲ್ಲಿ 11 ಸಾವಿರ ರಸ್ತೆ ಗುಂಡಿಗಳು ಇರೋದಾಗಿ ದೂರುಗಳು ದಾಖಲಾಗಿವೆ. ಇದುವರೆಗೂ 26 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ. ಇನ್ನೂ 11 ಸಾವಿರ ಗುಂಡಿಗಳನ್ನು ಮುಚ್ಚಬೇಕಿದೆ. ಗುಂಡಿ ಮುಚ್ಚುವುದಕ್ಕೆ ಡೆಡ್ ಲೈನ್ ಕೊಡೋಕೆ ಆಗಲ್ಲ. ಮಳೆ ಬರ್ತಾ ಇರುತ್ತೆ. ಗುಂಡಿಗಳು ಬೀಳ್ತಾ ಇರುತ್ತೆ, ಹಾಗಾಗಿ ನಿರಂತರವಾಗಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಾ ಇರುತ್ತೆ ಎಂಬ ಉತ್ತರ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


