ಬೆಂಗಳೂರು: ಕೋಲಾರದಲ್ಲಿ ಸ್ಪರ್ಧೆಗೆ ಇಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗೆ ಎಲ್ಲಿಲ್ಲದ ಅಗ್ನಿಪರೀಕ್ಷೆ ನಡೆಯುತ್ತಿದೆ.ಕೋಲಾರದಲ್ಲಿ ಸ್ಪರ್ಧೆಗೆ ಪಕ್ಷದ ಒಳಗೆ ವಿರೋಧಿ ಗುಂಪು ಒಂದು ಕಡೆಯಾದರೆ, ಇನ್ನೊಂದು ಕಡೆ ವಿಪಕ್ಷ ಜೆಡಿಎಸ್ (JDS) ನ ವಿರೋಧ ಮತ್ತೊಂದು ಕಡೆ. ಸಿದ್ದರಾಮಯ್ಯ ಕೋಲಾರ ನಿಂತ್ರೆ ಅವರನ್ನ ಬಿಡೋದು ಬೇಡ ಎಂದು ಸಿದ್ದರಾಮಯ್ಯಗೆ ಖೆಡ್ಡಾ ತೋಡೋಕೆ ಕುಮಾರಸ್ವಾಮಿ, ಇಬ್ರಾಹಿಂ (CM Ibrahim) ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಪಕ್ಷದ ವಿರೋಧದ ನಡುವೆ ದಳಪತಿಗಳಿಂದ ಸಿದ್ದರಾಮಯ್ಯ ಸೋಲಿಗೆ ಶಪಥ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸೋಲಿಸೋಕೆ ರಣತಂತ್ರ ಸಿದ್ಧವಾಗುತ್ತಿದೆ.ಕುಮಾರಸ್ವಾಮಿ-ಇಬ್ರಾಹಿಂ ಪ್ಲಾನ್ ಏನು..?: ಕೋಲಾರ ಕ್ಷೇತ್ರದಲ್ಲಿ ಒಕ್ಕಲಿಗ, ಅಲ್ಪಸಂಖ್ಯಾತ ಮತಗಳು ನಿರ್ಣಾಯಕ. ಹೀಗಾಗಿ ಈ ಮತಗಳ ಮೇಲೆ ಇಬ್ಬರು ನಾಯಕರು ಕಣ್ಣಿಟ್ಟಿದ್ದಾರೆ. ಒಕ್ಕಲಿಗ ಮತಗಳ ಭೇಟೆಗೆ ಕುಮಾರಸ್ವಾಮಿ (HD Kumaraswamy) ಹಾಗೂ ಅಲ್ಪಸಂಖ್ಯಾತ ಮತಗಳಿಗೆ ಇಬ್ರಾಹಿಂ ಅಖಾಡಕ್ಕೆ ಇಳಿಯುವುದಾಗಿದೆ. ಇದನ್ನೂ ಓದಿ: ಬಿಜೆಪಿಯ 20 ಶಾಸಕರಿಗೆ ಟಿಕೆಟ್ ಟೆನ್ಷನ್ – ಹೈಕಮಾಂಡ್ ಕೈ ಸೇರಿದೆ 16 ಜಿಲ್ಲೆಗಳ ಶಾರ್ಟ್ ಲಿಸ್ಟ್ಸಿದ್ದರಾಮಯ್ಯ ಸೋಲಿಸೋಕೆ ಕುಮಾರಸ್ವಾಮಿ, ಇಬ್ರಾಹಿಂ ಒಟ್ಟಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾರೆ. ಅತಿ ಹೆಚ್ಚು ಪ್ರಚಾರ ಸಭೆಗಳನ್ನು ಆಯೋಜನೆ ಮಾಡಿ ಸಿದ್ದರಾಮಯ್ಯ ವಿರುದ್ಧ ಜನ ವಿರೋಧಿ ಭಾವನೆ ಬರುವಂತೆ ಮೂಡಿಸೋದು. ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿಯಾಗಿದ್ದು, ಸಮ್ಮಿಶ್ರ ಸರ್ಕಾರ ಬೀಳಿಸಿದ್ದಾರೆ ಅಂತ ಪ್ರಚಾರ ಮಾಡಿ ಒಕ್ಕಲಿಗರ ಮತ ಪಡೆಯುವುದು.ಕಾಂಗ್ರೆಸ್ ಅಲ್ಪಸಂಖ್ಯಾತರನ್ನ ವೋಟ್ ಬ್ಯಾಂಕ್ ರಾಜಕೀಯ (Vote Bank Politics) ಕ್ಕೆ ಬಳಕೆ ಮಾಡಿಕೊಳ್ಳುತ್ತೆ ಅಂತ ಇಬ್ರಾಹಿಂ ಪ್ರಚಾರ ಮಾಡೋದು. ಹಾಗೂ ಕೋಲಾರ ಕ್ಷೇತ್ರದಲ್ಲಿ ಹೆಚ್ಚು ಮುಸ್ಲಿಂ ಸಮುದಾಯ ಸಭೆಗಳನ್ನ, ಚುನಾವಣೆ ಪ್ರಚಾರವನ್ನು ಪ್ರತ್ಯೇಕವಾಗಿ ಮಾಡಿ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


