ಬೆಂಗಳೂರು: ಎಲೆಕ್ಷನ್ ಹತ್ರ ಬಂದೇ ಬಿಡ್ತು. ಇನ್ನೆಷ್ಟು ದಿನ ಡೈಲಾಗ್..? ಹಳೇ ಕೇಸ್ ರೀ ಓಪನ್ ಮಾಡ್ಬಿಡಿ. ಖಾಲಿ ಡಬ್ಬಾ ಅಲ್ಲಾಡಿಸ್ಬೇಡಿ ಅಂತಾ ಬಿಜೆಪಿ (BJP) ಪಕ್ಷದ ಹಿರಿಯ ನಾಯಕರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar) ವಿರುದ್ಧ ಹಳೇ ಕೇಸ್ ರೀ ಓಪನ್ ಮಾಡುವುದಾಗಿ ಸಿಎಂ, ಸಚಿವರು ಗುಡುಗಿದ್ರು. ಸಿದ್ದರಾಮಯ್ಯ ಕೇಸ್ ರೀ ಓಪನ್ ಬಗ್ಗೆ ಬೊಮ್ಮಾಯಿ ಅಬ್ಬರಿಸಿ ಬೊಬ್ಬಿರಿದಿದ್ದರು. ಬಳ್ಳಾರಿಯ ಸಮಾವೇಶದಲ್ಲಿ ಗುಡುಗಿದ್ದ ಸಿಎಂ ಬಂಡವಾಳ ಬಯಲಾಗುತ್ತೆ, ನೋಡ್ತಿರಿ ಎಂದಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರದ ಮೇಲೆ ನಿತ್ಯ ಭ್ರಷ್ಟಾಚಾರದ ಚಾರ್ಜ್ ಮಾಡ್ತಿದೆ. ಹಾಗಾಗಿ ಕಾಂಗ್ರೆಸ್ (Congress) ನಾಯಕರ ದಾಳಿಗೆ ನೀವ್ ಏನ್ ಮಾಡ್ತಾ ಇದ್ದೀರಿ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಕಾಂಗ್ರೆಸ್ಸಿಗೆ ಕೌಂಟರ್ ಅಟ್ಯಾಕ್ ಕೊಡುವಂತೆ, ಹಳೇ ಕೇಸ್ ರೀ ಓಪನ್ ಮಾಡುವಂತೆ ಒತ್ತಡ ಹೆಚ್ಚಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೆ ದಳಪತಿಗಳ ಖೆಡ್ಡಾ – ಮಾಜಿ ಸಿಎಂ ಸೋಲಿಸಲು ಹೆಚ್‍ಡಿಕೆ ಶಪಥಈ ನಡುವೆ ಡಿಕೆಶಿ ಕೇಸ್ ಬಗ್ಗೆ ಇಂಧನ ಸಚಿವ ಸುನೀಲ್ ಕುಮಾರ್ ಮಾತಾಡಿದ್ದರು. ಸೋಲಾರ್ ಹಗರಣದಲ್ಲಿ ಏನಾಗಿದೆ ಗೊತ್ತಿದೆ, ತನಿಖೆ ಮಾಡಿಸುವುದಾಗಿ ಸುನೀಲ್ ಕುಮಾರ್ ಹೇಳಿದ್ದರು. ಹಾಗಾಗಿ ಕಾಂಗ್ರೆಸ್ ನಾಯಕರ ಹಳೇ ಕೇಸ್‍ಗಳನ್ನ ರೀ ಓಪನ್ ಮಾಡುವಂತೆ ಒತ್ತಡ ಹೆಚ್ಚಾಗಿದೆ. ಆದರೆ ಚುನಾವಣಾ ವೇಳೆ ದ್ವೇಷದ ರಾಜಕೀಯಕ್ಕೆ ಇಳಿಯುತ್ತಾರಾ ಬಸವರಾಜ ಬೊಮ್ಮಾಯಿ..? ಆರೋಪ-ಪ್ರತ್ಯಾರೋಪಗಳಲ್ಲೇ ಎಲೆಕ್ಷನ್ ಅಖಾಡಕ್ಕೆ ಇಳಿಯುತ್ತಾರಾ..? ರೀ ಓಪನ್ ಮಾಡ್ತಾರಾ..? ಎಂಬುದನ್ನ ಕಾದುನೋಡಬೇಕಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


