ಬಿ‌ಗ್ ಬಾಸ್ ಮನೆಯ (Bigg Boss House) ಪ್ರೇಮ ಪಕ್ಷಿಗಳಾಗಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer)  ಹೈಲೈಟ್ ಆಗಿದ್ದರು. ಬಿಗ್ ಬಾಸ್ ಮನೆಯ ಆಟ ಮುಗಿದ ಮೇಲೂ ಈ ಜೋಡಿ ಸಖತ್ ಸುದ್ದಿಯಲ್ಲಿದೆ. ಹೀಗಿರುವಾಗ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಅಡಿಗ (Rakesh Adiga) ಸ್ಪೋಟಕ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ.ಬಿಗ್ ಬಾಸ್ ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರೂಪೇಶ್, ಸಾನ್ಯ ಜೊತೆ ರಾಕೇಶ್ ಅಡಿಗ ಕೂಡ ಕಾಣಿಸಿಕೊಂಡಿದ್ದರು. ಇನ್ನೂ ರೂಪೇಶ್ ಮತ್ತು ಸಾನ್ಯ ಹಲವು ಬಾರಿ ನಾವಿಬ್ಬರು ಫ್ರೆಂಡ್ಸ್ ಅಷ್ಟೇ ನಮ್ಮಿಬ್ಬರ ನಡುವೆ ಬೇರೇ ಎನಿಲ್ಲ ಎಂದು ಹೇಳಿದ್ದರು. ಆದರೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವರ ನಡುವೆ ಪ್ರೇಮವಿದೆ ಎಂದೇ ವೀಕ್ಷಕರು ಊಹಿಸಿದ್ದರು. ಈ ಬಗ್ಗೆ ರಾಕೇಶ್ ಅಡಿಗ ಕೂಡ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?ನಾನು ಒಟಿಟಿಯಲ್ಲಿರುವಾಗಲೇ ರೂಪೇಶ್ (Roopesh Shetty) ಮತ್ತು ಸಾನ್ಯಗೆ ಕೇಳಿದ್ದೆ, ನೀವಿಬ್ಬರು ಡೇಟಿಂಗ್ ಮಾಡ್ತೀರಾ ಅಂತಾ. ಇಲ್ಲಾ ಅಂತಾನೇ ಇಬ್ಬರು ಉತ್ತರ ಕೊಟ್ಟಿದ್ದರು. ಒಟಿಟಿ ಫಿನಾಲೆ ಬಳಿಕ ರೆಸಾರ್ಟ್‌ನಲ್ಲಿರುವಾಗ(Resort) 10 ದಿನ ಇರುವಾಗ ಅಲ್ಲಿ ಮೈಕ್ ಮತ್ತು ಕ್ಯಾಮೆರಾ ಇರಲಿಲ್ಲ ಅಲ್ಲೂ ಕೂಡ ನಾನು ಕೇಳಿದ್ದೀನಿ. ನೀವಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದೀರಾ ಅಂತಾ, ಆಗ ಇಲ್ಲಾ ಅಂತಾ ಇಬ್ಬರು ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದರು.ಒಟಿಟಿಯಲ್ಲಿರುವಾಗಲೇ ಇಬ್ಬರು ರೂಪೇಶ್ ಮತ್ತು ಸಾನ್ಯ ಒಟ್ಟಿಗೆ ಇದ್ದರು. ರೆಸಾರ್ಟ್‌ನಲ್ಲಿ ಇಬ್ಬರ ಬಾಂಡಿಂಗ್ ಮತ್ತಷ್ಟು ಸ್ಟ್ರಾಂಗ್ ಆಯ್ತು. ಸೀಸನ್ 9ರಲ್ಲಿ ಒಬ್ಬರಿಗೊಬ್ಬರು ಸರ್ಪೋಟ್ ಸಿಸ್ಟಮ್ ಆಗಿದ್ದರು. ಸಾನ್ಯ ಮೇಲೆ ರೂಪೇಶ್‌ಗೆ ತುಂಬಾ ನಂಬಿಕೆಯಿದೆ. ಅವಳು ಏನೇ ತನ್ನ ಒಳ್ಳೆಯದಕ್ಕೆ ಎನ್ನುವ ವಿಶ್ವಾಸವಿದೆ. ಹಾಗಾಗಿ ಸಾನ್ಯ ಎಲಿಮಿನೇಷನ್‌ನ (Elimination) ರೂಪೇಶ್‌ಗೆ ಒಪ್ಪಿಕೊಳ್ಳೋಕೆ ಸಾಧ್ಯವಾಗಲಿಲ್ಲ ಇದಾದ ಒಂದು ವಾರದ ಬಳಿಕ ರೂಪೇಶ್ ಶೆಟ್ಟಿ ಬದಲಾದರು. ಟಫ್ ಫೈಟ್ ಕೊಟ್ರು ಎಂದು ರಾಕೇಶ್ ಅಡಿಗ ಮಾತನಾಡಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


