ಮೈಸೂರು: ಬೆಂಗಳೂರು – ಮೈಸೂರು ನಡುವಿನ ದಶಪಥ ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆಗೊಳಿಸಲಾಗುತ್ತದೆ ಎಂಬ ಸಿಹಿ ಸುದ್ದಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ನಿನ್ನೆಯಷ್ಟೇ ನೀಡಿದ್ರು. ಇದೀಗ, ದ್ವಿಚಕ್ರ-ತ್ರಿಚಕ್ರ ವಾಹನಗಳಿಗೆ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ (Bengaluru Mysuru Expressway) ಸಂಚರಿಸಲು ಅವಕಾಶವಿರಲ್ಲ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಮಾಹಿತಿ ನೀಡಿದ್ದಾರೆ.Aerial survey.#MysuruBengaluruExpressway pic.twitter.com/8FxVkMKjYF— Pratap Simha (@mepratap) January 5, 2023ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ವಿಸ್ ರಸ್ತೆ ನಿರ್ಮಾಣವಾದ ಮೇಲೆ ದ್ವಿಚಕ್ರ ಹಾಗೂ ಮೂರು ಚಕ್ರ ವಾಹನಗಳಿಗೆ ಹೈವೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇರಲ್ಲ. ಅಪಘಾತ ಮುಕ್ತ ಎಕ್ಸ್‌ಪ್ರೆಸ್‌ ವೇ ಮಾಡುವ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಸುಬ್ರಹ್ಮಣ್ಯದಲ್ಲಿ ಥಳಿತAerial survey. pic.twitter.com/Rc0Fv0IjQQ— Pratap Simha (@mepratap) January 5, 2023ಇನ್ನೂ ಹೈವೇಗೆ ಏಕೆ `ಕಾವೇರಿ ಎಕ್ಸ್‌ಪ್ರೆಸ್‌ ವೇ’ (Cauvery Expressway SM Krishna) ಎಂದು ಹೆಸರಿಡೋಕೆ ಹೇಳಿದೆ ಎಂಬ ಬಗ್ಗೆ ಪ್ರತಾಪ್ ಸಿಂಹ ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳಉತ್ತರಪ್ರದೇಶದಲ್ಲಿ (UttarPradesh) ನದಿಗಳ (Rivers) ಹೆಸರನ್ನು ಹೆದ್ದಾರಿಗೆ ಇಟ್ಟಿದ್ದಾರೆ. ಅದೇ ರೀತಿಯಲ್ಲಿ ಕಾವೇರಿ ನದಿ ಹೆಸರನ್ನು ಹೈವೆಗೆ ಇಡಲು ಮನವಿ ಮಾಡಿದ್ದೇನೆ. ಕಾವೇರಿ ಜೀವನದಿ, ಪವಿತ್ರವಾದ ನದಿ. ಬಹಳ ಭಕ್ತಿಯಿಂದ ಪೂಜಿಸುವ ನದಿ ಕಾವೇರಿ. ಬೆಂಗಳೂರು ಉದ್ಧಾರವಾಗಿದ್ದೇ ಕಾವೇರಿ ನದಿಯಿಂದ. ರಾಜಕಾರಣಿಗಳು ಒಂದೊಂದು ಹೆಸರು ಹೇಳುತ್ತಿದ್ದಾರೆ. ಕಾವೇರಿ ನದಿ ಇಲ್ಲದೇ ಇದ್ದಿದ್ದರೆ ನಾವು ಯಾವ ನೀರು ಕುಡಿಯಬೇಕಿತ್ತು? ಕಾವೇರಿ ನದಿ ಇರದಿದ್ದರೆ ಕನ್ನಂಬಾಡಿ ಕಟ್ಟಲು ಆಗುತ್ತಿತ್ತಾ? ನಾಲ್ವಡಿ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುತ್ತಿದ್ದೇವೆ. ಆದ್ದರಿಂದ ಇಲ್ಲಿಗೆ ಕಾವೇರಿ ಹೆಸರು ಸೂಕ್ತ ಎಂದು ಪುನರುಚ್ಚರಿಸಿದ್ದಾರೆ.ದಶಪಥ ರಸ್ತೆಗೆ ಹೆಚ್.ಡಿ ದೇವೇಗೌಡರ ಹೆಸರು ಇಡುವಂತೆಯೂ ಒತ್ತಾಯ ಕೇಳಿ ಬಂದಿದೆ. ದೇಶದಲ್ಲಿ ಎಲ್ಲೂ ಹೈವೆಗೆ ವ್ಯಕ್ತಿಯ ಹೆಸರು ಇಟ್ಟಿಲ್ಲ. ಎಸ್.ಎಂ. ಕೃಷ್ಣ ಅವರ ಬಗ್ಗೆ ಗೌರವವಿದೆ. ಅವರನ್ನು ಕೇಳುತ್ತೇವೆ. ಎಲ್ಲರೂ ಸೇರಿ ಕಾವೇರಿ ನದಿ ಹೆಸರು ಇಡಲು ಸಿಎಂಗೆ ಮನವಿ ಮಾಡೋಣ ಎಂದು ಹೇಳಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


