ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮೂಗಿನ ನೇರಕ್ಕೆ ಲಂಚ ನಡೆಯುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಜಗದೀಶ್ ಬುಧವಾರ ವಿಧಾನಸೌಧದಲ್ಲಿ (Vidhanasoudha) ಅನಧಿಕೃತವಾಗಿ 10.50 ಲಕ್ಷ ರೂ. ಹಣವನ್ನು (Money) ಸಾಗಾಟ ಮಾಡುತ್ತಿದ್ದ ವಿಚಾರವಾಗಿ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ, ಅದರ ಅರ್ಥ ವಿಧಾನಸೌಧದಲ್ಲೇ ಲಂಚ ನಡೆಯುತ್ತದೆ. ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.ಆತ ವಿಧಾನಸೌಧಕ್ಕೆ ಯಾರಿಗೆ ಹಣ ಕೊಡಲು ಬಂದಿದ್ದ? ಪಿಡಬ್ಲ್ಯುಡಿ ಸಚಿವ ಸಿಸಿ ಪಾಟೀಲ್‌ಗೆ ಹಣ ಕೊಡಲು ಬಂದಿರಬೇಕು, ಇಲ್ಲವೇ ಮುಖ್ಯಮಂತ್ರಿಗಳಿಗೆ ಕೊಡೋದಕ್ಕೆ ಬಂದಿರಬೇಕು ಅಲ್ವಾ? ಎಂದು ಟಾಂಗ್ ನೀಡಿದರು.ಬುಧವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಜಗದೀಶ್ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು. ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವರ ಬ್ಯಾಗ್‌ನಲ್ಲಿ 10.50 ಲಕ್ಷ ರೂ. ಪತ್ತೆಯಾಗಿತ್ತು. ಅವರ ಬಳಿ ಇಷ್ಟೊಂದು ದೊಡ್ಡ ಮೊತ್ತದ ಹಣದ ಕುರಿತಾಗಿ ಮಾಹಿತಿ ಕೇಳಿದಾಗ ಅವರು ಸರಿಯಾಗಿ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆ ಪೊಲೀಸರು ಜಗದೀಶ್‌ನನ್ನು ಹಾಗೂ ಹಣವನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ: ಸುಮಲತಾಅವರು ಯಾವ ವಿಚಾರಕ್ಕೆ ಹಣ ತಂದಿದ್ದರು? ಯಾರಿಗೆ ಹಣ ಸಾಗಿಸಲಾಗುತ್ತಿತ್ತು? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಜಗದೀಶ್ ಚೆಕ್ ಬೌನ್ಸ್ ಪ್ರಕರಕ್ಕೆ ಹಣ ಹಿಂತಿರುಗಿಸಲು ತಂದಿದ್ದಾಗಿ ಹೇಳಿಕೆ ನೀಡಿದ್ದಾರೆ.ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ಸಮೇತ 12 ಲಕ್ಷ ರೂ. ಕಟ್ಟಲು ಹೇಳಿತ್ತು. ತನ್ನ ಸಂಬಂಧಿಕರ ಬಳಿಯಿಂದ 10.50 ಲಕ್ಷ ಹಣವನ್ನು ತಂದಿದ್ದೆ. ವಿಧಾನಸೌಧದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕರೆದಿದ್ದರು. ಹೀಗಾಗಿ ತನ್ನ ಊರು ಮಂಡ್ಯಕ್ಕೆ ಹೋಗುವುದಕ್ಕೂ ಮುನ್ನ ವಿಧಾನಸೌಧಕ್ಕೆ ಬಂದಿದ್ದಾಗಿ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ನಡೆಯದೇ ಹೋಯ್ತಾ ವರುಣಾ ರಾಜಕೀಯ ಮಹಾಯುದ್ಧ – ವಿಜಯೇಂದ್ರ ವರುಣಾ ಪಥ ಬದಲು!
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


