ಧಾರವಾಡ: ಕುಮಾರಸ್ವಾಮಿ (H.D Kumaraswamy) ಪಾರ್ಟಿ ಎಂದರೆ ಅದು ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ ಮತ್ತು ಬೈ ದಿ ಫ್ಯಾಮಿಲಿ ಥರ. ಒಂದು ರಸ್ತೆಗೆ ಹೆಚ್‌.ಡಿ ದೇವೇಗೌಡರ (H.D DeveGowda) ಹೆಸರಿಡಬೇಕೆಂಬ ಮನವಿ ಬಂದಿದೆ ಈ ಬಗ್ಗೆ ಯೋಚಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ರಸ್ತೆಗೆ ದೇವೇಗೌಡರ ಹೆಸರಿಡಬೇಕು ಎಂದು ಯಾರೋ ಹೇಳಿದ್ದಾರೆ. ಅದಕ್ಕೆ ಕಾಮೆಂಟ್ ಕೂಡ ಬಂದಿದೆ ಸರ್ವಿಸ್ ರಸ್ತೆಗೆ ಕುಮಾರಸ್ವಾಮಿ, ರೇವಣ್ಣ ಹೆಸರಿಡಬೇಕು, ಸೇತುವೆಗೆ ಪ್ರಜ್ವಲ್‌ ರೇವಣ್ಣ ಹೆಸರು, ಅಂಡರ್ ಪಾಸ್‍ಗೆ ನಿಖಿಲ್ ಹೆಸರು, ಫ್ಲೈಓವರ್‌ಗೆ ಅನಿತಾ ಕುಮಾರಸ್ವಾಮಿ ಎಂದು ಹೆಸರಿಡಿ ಎಂದು ಕಾಮೆಂಟ್ ಬಂದಿವೆ. ಇವರ ಪಕ್ಷಕ್ಕೆ ಜನ ಯಾವ ರೀತಿ ಕಾಮೆಂಟ್ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಿ ಎಂದು ಜೋಶಿ ಲೇವಡಿ ಮಾಡಿದರು. ಇದನ್ನೂ ಓದಿ: ಪಕ್ಷ ತೊರೆದಿದ್ದ ಘಟಾನುಘಟಿ ಕಾಶ್ಮೀರ ನಾಯಕರು ಮತ್ತೆ ಕಾಂಗ್ರೆಸ್ ಸೇರ್ಪಡೆಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೀಸಲಾತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಸಿಗುವಂತೆ ಸಿಎಂ ದೃಢ ಹೆಜ್ಜೆಯನ್ನಿಡುತ್ತಿದ್ದಾರೆ. ಈ ಸಂಬಂಧ ಸಿಎಂ ಕ್ಯಾಬಿನೆಟ್‍ನಲ್ಲಿ ನಿರ್ಧಾರ ಮಾಡಿದ್ದಾರೆ. ಮೀಸಲಾತಿಗೆ ಬೇಡಿಕೆ ಬಂದಿರುವ ಬಗ್ಗೆ ಎಲ್ಲ ವಿಸ್ತೃತ ವರದಿ ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಅವರು ಮುಂದುವರಿಯುತ್ತಾರೆ. ಸಿಎಂ ಮೇಲೆ ವಿಶ್ವಾಸ ಇಟ್ಟು ಮುಂದುವರಿಯಬೇಕು ಎಂದು ಜೋಶಿ ಮನವಿ ಮಾಡಿದರು. ಇದನ್ನೂ ಓದಿ: ದೇಶ ಕಾಯುವಾಗ ನಾವು ನಿಯತ್ತಿನ ನಾಯಿಗಳೇ – ಸಿದ್ದುಗೆ ಸಿ.ಟಿ ರವಿ ಗುದ್ದುಐಐಟಿ (IIT) ಉದ್ಘಾಟನೆ ಜನವರಿ ತಿಂಗಳಲ್ಲಿ ಆಗಬೇಕಿತ್ತು. ಆದರೆ, ಕಟ್ಟಡ ಕಾಮಗಾರಿ ಇನ್ನೂ ಬಾಕಿ ಇರುವುದರಿಂದ ಅದು ಆಗುವುದಿಲ್ಲ. ಇದನ್ನು ಪ್ರಧಾನಿಗಳ ಗಮನಕ್ಕೆ ತಂದಿದ್ದೇನೆ. ಐಐಟಿ ಉದ್ಘಾಟನೆಗೆ ಒಂದು ದಿನ ಬರುವ ಭರವಸೆಯನ್ನು ಮೋದಿ (Narendra Modi) ಅವರು ಕೊಟ್ಟಿದ್ದಾರೆ ಎಂದರು.ಸ್ಯಾಂಟ್ರೋ ರವಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸ್ಯಾಂಟ್ರೋ ರವಿ ಯಾರು, ಏನು ಎಂಬುದನ್ನು ಈಗಾಗಲೇ ಸಿಎಂ ಹೇಳಿದ್ದಾರೆ. ಅವರ ಜೊತೆ ಯಾರ ಸಂಪರ್ಕ ಇದೆ ಎಂಬುದನ್ನೂ ಅವರು ಹೇಳಿದ್ದಾರೆ. ಯಾವುದೇ ಆಧಾರ ಇಲ್ಲದೆ ಈ ರೀತಿ ಒಬ್ಬರಿಗೆ ನಾಯಿ ಮರಿ ಎನ್ನುವುದು, ಒಬ್ಬರು ಸ್ಯಾಂಟ್ರೋ ರವಿ ಎಂದು ಮಾತನಾಡುವುದು ಸರಿಯಲ್ಲ. ಈಗ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಚಿಲ್ಲರೆ ಹಂತಕ್ಕೆ ಇಳಿಯಬಾರದು ಎಂದು ಅಭಿಪ್ರಾಯ ತಿಳಿಸಿದರು.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


