ಬೆಂಗಳೂರು: ಬಿ.ವೈ ವಿಜಯೇಂದ್ರ (B.Y Vijayendra) ಓಲ್ಡ್ ಮೈಸೂರು ಪೊಲಿಟಿಕ್ಸ್‌ಗೆ ಬ್ರೇಕ್ ಬಿದ್ದಾಯ್ತಾ? ಮುಂದೇನು? ಈ ವಿಚಾರಕ್ಕೆ ಜನವರಿ 9ಕ್ಕೆ ಕ್ಲಾರಿಟಿ ಸಿಗುವ ಸಾಧ್ಯತೆ ಹೆಚ್ಚು. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೋಲಾರ (Kolara) ಫಿಕ್ಸ್ ಮಾಡಿಕೊಂಡ್ರೆ, ವಿಜಯೇಂದ್ರ ಶಿಕಾರಿಪುರದಲ್ಲೇ ಫಿಕ್ಸ್ ಎಂಬ ಮಾತಿದೆ. ಇದರಿಂದಾಗಿ ಮೈಸೂರು ಜಿಲ್ಲೆಯಲ್ಲೊಂದು ರಾಜಕೀಯ ಮಹಾಯುದ್ಧ ನಡೆಯದೇ ಹೋಯ್ತಾ ಎಂಬ ಚರ್ಚೆಗಳು ಶುರುವಾಗಿವೆ.ಆ ಕಡೆ ಕೋಲಾರ ಕ್ಷೇತ್ರದ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಘೋಷಣೆಯಾಗ್ತಿದ್ದಂತೆ ವರುಣಾ ಕ್ಲಾರಿಟಿ ಸಿಗುವುದು ಬಹುತೇಕ ಪಕ್ಕಾ. ಪುತ್ರನ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ವರುಣಾ ಬಿಟ್ಟುಕೊಡಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಶಿಕಾರಿಪುರದ ಜೊತೆ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆಗಿಳಿಸುವ ಪ್ಲಾನ್ ಬದಲಾಗುವ ಸಾಧ್ಯತೆ ಇದೆ. ಅಂದಹಾಗೆ ಸಿದ್ದರಾಮಯ್ಯ ಕಟ್ಟಿ ಹಾಕಲು ವಿಜಯೇಂದ್ರ ಸ್ಪರ್ಧೆಗಿಳಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ಆಗಿತ್ತು. ವರುಣಾದಲ್ಲಿ ವಿಜಯೇಂದ್ರ ಹವಾ ಇರುವ ಕಾರಣ ಅಲ್ಲಿ ಸಿದ್ದುಗೆ ಟಕ್ಕರ್ ಕೊಡುವ ತಂತ್ರ ಇತ್ತು. ಆದ್ರೆ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ವರುಣಾ ಫೈನಲ್ ಮಾಡಿದ್ರೆ ಅಲ್ಲಿಗೆ ವಿಜಯೇಂದ್ರ ವರುಣಾ ಗೇಮ್ ಬಂದ್ ಆಗಲಿದೆ. ಇದನ್ನೂ ಓದಿ: ಅವರವ್ರ ಕ್ಷೇತ್ರ ನೋಡಿಕೊಳ್ಳಲಾಗದವರು ರಾಷ್ಟ್ರ ರಾಜಕಾರಣದ ಬಗ್ಗೆ ಮಾತಾಡ್ತಾರೆ: ಜಿಟಿಡಿಈ ನಡುವೆ ಹಳೆ ಮೈಸೂರು (Old Mysuru) ಭಾಗದ ಸಭೆಗೂ ವಿಜಯೇಂದ್ರಗೆ ಆಹ್ವಾನ ನೀಡದ ರಾಜ್ಯ ಬಿಜೆಪಿ (BJP) ಘಟಕ ಕುತೂಹಲದ ಹೆಜ್ಜೆ ಇಟ್ಟಿದೆ. ಇದರಿಂದಾಗಿ ಹಳೆ ಮೈಸೂರು ಭಾಗದ ಸಂಘಟನೆಯಿಂದಲೂ ವಿಜಯೇಂದ್ರ ದೂರ ಆಗ್ತಾರೋ, ಅಲ್ಲಲ್ಲಿ ಪ್ರಚಾರಕ್ಕಿಳಿಯುತ್ತಾರಾ? ಇಲ್ಲ ಸಂಪೂರ್ಣವಾಗಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ವಿಜಯೇಂದ್ರ ಹೆಚ್ಚು ಫೋಕಸ್ ಮಾಡುವಂತೆ ಸೂಚಿಸ್ತಾರಾ? ಬೇರೆ ಪ್ಲ್ಯಾನ್ ಇದೆಯೋ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲು ಮಾಯೆ- ಸರ್ಕಾರಕ್ಕೆ ಹೊಸ ಗಡುವು, ಮತ್ತೆ ಇಕ್ಕಟ್ಟು
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


