ಇಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ (Sandalwood) ತಿರುಗಿ ನೋಡುವಂತೆ ಮಾಡಿ, ಇತಿಹಾಸ ಸೃಷ್ಟಿಸಿದ ಕನ್ನಡದ ಹೆಮ್ಮೆಯ ಸಿನಿಮಾ `ಕಾಂತಾರ’ (Kantara Film) ಇದೀಗ ಟಿವಿ ಪರದೆಯಲ್ಲಿ ಮಿಂಚಲು ಮುಹೂರ್ತ ಫಿಕ್ಸ್ ಆಗಿದೆ.ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿದ `ಕಾಂತಾರ’ ಸಿನಿಮಾಗೆ ಇಡೀ ದೇಶವೇ ಹಾಡಿ ಹೊಗಳಿತ್ತು. ಚಿತ್ರಮಂದಿರದ ನಂತರ ಒಟಿಟಿಯಲ್ಲಿಯೂ ಕಮಾಲ್ ಮಾಡಿತ್ತು. ಸುವರ್ಣ ವಾಹಿನಿಯಲ್ಲಿ ಜೇಮ್ಸ್, ಲಕ್ಕಿಮ್ಯಾನ್, ಅಂತಹ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಇದೀಗ `ಕಾಂತಾರ’ (Kantara) ಎಂಬ ದಂತಕಥೆಯೊಂದು ಸೇರ್ಪಡೆಯಾಗುತ್ತಿದೆ. ಈ ಮೂಲಕ `ಕಾಂತಾರ’ ಕಿರುತೆರೆಗೆ ಲಗ್ಗೆ ಇಡುತ್ತಿದೆ. ಸಂಕ್ರಾಂತಿ ಹಬ್ಬದಂದು (Sankranti Festival) ಸಿನಿಮಾ ಪ್ರಸಾರವಾಗುವ ಮೂಲಕ ಫ್ಯಾನ್ಸ್‌ಗೆ ವಾಹಿನಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.ಇದು ಕರ್ನಾಟಕದ (Karnataka) ತುಳುನಾಡಿನ ಪ್ರಾಂತ್ಯದಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ, ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ನಡೆಯುವ ಕಥೆ. ಹೈವೋಲ್ಟೇಜ್ ದೃಶ್ಯಗಳಿಂದ ಆರಂಭವಾಗುವ ಸಿನಿಮಾವು ನೋಡು ನೋಡುತ್ತಿದ್ದಂತೆ ವೀಕ್ಷಕರಿಗೆ ಮಂತ್ರಮುಗ್ಧರನ್ನಾಗಿಸಿತ್ತು. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?ಕನ್ನಡದ ಕಿರೀಟ `ಕಾಂತಾರ’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಹಾಗೂ ಸಪ್ತಮಿ ಗೌಡ (Saptami Gowda) ನಟಿಸಿದ್ದು, ದೀಪಕ್ ರೈ, ಗುರು ಸನಿಲ್, ಪ್ರಕಾಶ್ ತುಮಿನಾಡು, ರಂಜನ್, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಸೇರಿದಂತೆ ಇನ್ನು ಅನೇಕರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಕನ್ನಡಿಗರು ಹೊತ್ತು ಕೊಂಡಾಡಿದ ಹೆಮ್ಮೆಯ ಕಥೆ `ಕಾಂತಾರ’ ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯಲ್ಲಿ ದೈವ ದರ್ಶನವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


