ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ. ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದರೆ, ರಾಕೇಶ್ ಅಡಿಗ(Rakesh Adiga) ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮನೆಯಿಂದ ಹೊರಬರುತ್ತಲೇ ರಾಕೇಶ್ ಅಡಿಗ ಅವರಿಗೆ ಸೋನು ಗೌಡ 9Sonu Srinivas Gowda) ಜೊತೆಗಿನ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಸೋನು ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ರಾಕೇಶ್ ಅವರ ನಡೆಯೇನು ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.`ಜೋಶ್’ (Josh Film) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ರಾಕೇಶ್ ಅಡಿಗ ಈಗ ಬಿಗ್ ಬಾಸ್ ಸೀಸನ್ 9ರ ರನ್ನರ್ ಅಪ್ ಆಗಿ ಸೌಂಡ್ ಮಾಡ್ತಿದ್ದಾರೆ. ಇನ್ನೂ ಬಿಗ್ ಬಾಸ್ ಒಟಿಟಿಯಲ್ಲಿ ಸೋನು ಮತ್ತು ರಾಕೇಶ್ ಅಡಿಗ ಅವರ ಸ್ನೇಹ ಹೈಲೈಟ್ ಆಗಿತ್ತು. ಇಬ್ಬರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ತಮ್ಮ ಮತ್ತು ಸೋನು ನಡುವಿನ ಗೆಳೆತನದ ಬಗ್ಗೆ ರಾಕೇಶ್ ಮಾತನಾಡಿದ್ದಾರೆ. ಸೋನು (Sonu Gowda) ಜೊತೆ ರಾಕೇಶ್ ಮದುವೆಯಾಗುತ್ತಾರಾ ಎಂಬುದಕ್ಕೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.ಸೋನು ಕುಟುಂಬದ (Family) ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ಸೋನುನೇ ಉತ್ತರ ಕೊಡುತ್ತಾರೆ. ಸೋನುಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಮದುವೆ ಬಗ್ಗೆ ಮಾತು ಬಂದರೆ ನೋ ಅಂತಾನೇ ಹೇಳ್ತೀನಿ. ಇನ್ನೂ ಸೋನು ಗೌಡ ಅವರ ಮನೆ ಕಡೆಯಿಂದ ಮದುವೆ ಮಾತು ಬರೋದೇ ಇಲ್ಲಾ ಎಂದು ರಾಕೇಶ್ ಹೇಳಿದ್ದಾರೆ. ಇದನ್ನೂ ಓದಿ: ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿಈ ಮೂಲಕ ಸೋನು ಜೊತೆಗಿನ ಎಲ್ಲಾ ವದಂತಿಗೂ ನಟ ರಾಕೇಶ್ ಅಡಿಗ ಬ್ರೇಕ್ ಹಾಕಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


