ಚಿಕ್ಕಬಳ್ಳಾಪುರ: ದೇಶ ಕಾಯುವಾಗ ನಾವು ನಿಯತ್ತಿನ ನಾಯಿಗಳು, ದೇಶ – ರಾಜ್ಯದ ಹಿತಾಸಕ್ತಿ ಪ್ರಶ್ನೆ ಬಂದಾಗ ನಾವೆಲ್ಲರೂ ರಾಜಾಹುಲಿಗಳು ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಗುಡುಗಿದ್ದಾರೆ.ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಸಿಎಂ ಬೊಮ್ಮಾಯಿ (Basavaraj Bommai) ಅವರನ್ನ ನಾಯಿಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ನಾಯಿ (Dog) ನಿಯತ್ತಿನ ಪ್ರಾಣಿ. ತುತ್ತು ಅನ್ನ ಹಾಕಿದ್ರೆ ಜೀವನಪರ್ಯಂತ ನಿಯತ್ತಾಗಿರುತ್ತೆ. ನಿಯತ್ತು ಇಲ್ಲದೇ ಇರೋರು ಕಾಂಗ್ರೆಸ್‌ನವರು. ಉಂಡ ಮನೆಗೆ ದ್ರೋಹ ಬಗೆಯುವವರು ಯಾರು ಅಂತಾ ಸಿದ್ದರಾಮಯ್ಯಗೆ ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ವಿಧಾನಸೌಧವನ್ನು ಜಗತ್ತಿನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ: ಪ್ರಿಯಾಂಕ್ ಖರ್ಗೆಜೆಡಿಎಸ್‌ನಲ್ಲಿದ್ದು (JDS) ಅವರಿಗೆ ದ್ರೋಹ ಬಗೆದವರು ಯಾರು? ಜಿ.ಪರಮೇಶ್ವರ್ (G. Parameshwara) ಸಿಎಂ ಆಗಿಬಿಡ್ತಾರೆ ಅಂತಾ ಸೋಲಿಸಿದವರು ಯಾರು? ಸಿದ್ದರಾಮಯ್ಯ ತಮ್ಮ ಆತ್ಮ ಸಾಕ್ಷಿ ಪ್ರಶ್ನೆ ಮಾಡಿಕೊಳ್ಳಲಿ. ಆಗ ನಿಯತ್ತು ಯಾರಿಗೆ ಇದೆ ಯಾರಿಗೆ ಇಲ್ಲಾ ಅನ್ನೋದು ಗೊತ್ತಾಗುತ್ತದೆ. ತನಗೆ ಅಧಿಕಾರ ಇದ್ದಾಗ ಎಲ್ಲವೂ ಸರಿ ಅಧಿಕಾರ ಇಲ್ಲದಿದ್ದಾಗ ಬಂಡಾಯದ ಮನಸ್ಥಿತಿ. ಹಾಗಾಗಿ ಸಿದ್ದರಾಮಯ್ಯ ಅವರನ್ನ ನಿಯತ್ತಿಗೆ ಹೋಲಿಕೆ ಮಾಡಲಾಗಲ್ಲ. ಜನರು ರಾಜ್ಯದ ಹಿತ ಬಯಸುವ ಸಿಎಂ ಅವರನ್ನ ನಿಯತ್ತಿನ ನಾಯಿಗೆ ಹೋಲಿಸಿದ್ರೆ ಸ್ವೀಕಾರ ಮಾಡ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ವೀಡಿಯೋ: ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷವೆಂದ ಪ್ರಿಯಾಂಕ್ ಖರ್ಗೆರೈಲ್ವೆ ಹಾಗೂ ಹೆದ್ದಾರಿಗಳಿಗೆ ಅತಿ ಹೆಚ್ಚು ಹಣ ಕೊಟ್ಟಿದ್ದು ಬಿಜೆಪಿ ಕೇಂದ್ರ ಸರ್ಕಾರ. ರೈತರಿಗೆ ರೈತ ಸಮ್ಮಾನ್ ಹಣ ನೀಡ್ತಿರೋದು ಮೋದಿ ಸರ್ಕಾರ. ರಾಜ್ಯ, ದೇಶದ ಹಿತಾಸಕ್ತಿ ಪ್ರಶ್ನೆ ಬಂದಾಗ ನಾವೆಲ್ಲರೂ ರಾಜಾಹುಲಿಗಳೇ, ನಾವ್ ದೇಶ ಕಾಯುವಾಗ ನಿಯತ್ತಿನ ನಾಯಿಗಳೂ ಹೌದು. ಆದ್ರೆ ನಿಯತ್ತು ಇಲ್ಲದ ನಿಮ್ಮನ್ನ ಯಾವುದಕ್ಕೆ ಹೋಲಿಕೆ ಮಾಡಲಿ ಅಂತಾ ಪ್ರಶ್ನಿಸಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


