ಬೆಂಗಳೂರು: ಬಿಜೆಪಿ ಚಾಣಕ್ಯ ಅಮಿತ್ ಶಾ (Amit Shah) ಟಾಸ್ಕ್ ರೆಡಿಯಾಗಿದ್ದು ಟಿ20 ಗೇಮ್ ಶುರು ಆಗಿದೆ. ಬಿಜೆಪಿಯಲ್ಲಿ (BJP) 20+20 ಟಾಸ್ಕ್ ಬಗ್ಗೆ ಚರ್ಚೆ ಆಗುತ್ತಿದ್ದು, ಯಾರೆಲ್ಲ ಟಾಪ್ ಪ್ಲೇಯರ್ಸ್? ಎಂಬ ಕುತೂಹಲ ಮನೆ ಮಾಡಿದೆ. ಜನವರಿ ಕೊನೆ ವಾರದಲ್ಲಿ ಟಾಸ್ಕ್ ಫೈನಲ್ ಆಗುತ್ತಾ? ಸೂತ್ರದ ಅಸಲಿಯತ್ತೇನು? ಎಂಬ ಪ್ರಶ್ನೆಗಳು ಬಿಜೆಪಿಯಲ್ಲಿ ಸದ್ದು ಮಾಡುತ್ತಿದ್ದು, 1+1 ಸೂತ್ರದ ಬಗ್ಗೆಯೇ ಚರ್ಚೆಯಾಗುತ್ತಿದೆ.ಬಿಜೆಪಿಯಲ್ಲಿ ಸ್ವಂತ ಶಕ್ತಿ ಮೇಲೆ ಸುಲಭವಾಗಿ ಗೆಲ್ಲುವ ಕುದುರೆಗಳ ಹುಡುಕಾಟ ನಡೆಯುತ್ತಿದೆ. ಮುಂದಿನ ಬಾರಿ ಬರುವಾಗ ಎಲ್ಲರ ಲಿಸ್ಟ್ ರೆಡಿ ಮಾಡಿ ಎಂದು ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಜನವರಿ 2ನೇ, 3ನೇ ವಾರದಲ್ಲಿ ಮತ್ತೆ ಅಮಿತ್ ಶಾ ಬರುವ ಸಾಧ್ಯತೆ ಇದ್ದು, ಅಲ್ಲಿ ತನಕ ಕನಿಷ್ಠ 20 ಗೆಲ್ಲುವ ಕುದುರೆಗಳನ್ನು ಗುರುತಿಸಿ ಇಡಿ ಎಂದು ಟಾಸ್ಕ್ ಕೊಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಅಂದಾಜು 20ಕ್ಕೂ ಹೆಚ್ಚು ಕೇಕ್‌ವಾಕ್ ಗೆಲುವಿನ ಲೀರ‍್ಸ್ ಇದ್ದಾರೆ. ಆ 20 ಲೀಡರ್‌ಗಳಿಗೆ ಟಿ20 ಟಾಸ್ಕ್ ಕೊಡಲು ಅಮಿತ್ ಶಾ ಮೆಗಾ ಪ್ಲ್ಯಾನ್ ಮಾಡಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಇದನ್ನೂ ಓದಿ: ಕೋಲಾರ ಸ್ಪರ್ಧೆ ಫಿಕ್ಸ್- ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?ಈಗಾಗಲೇ ಟಿ20 ಗೇಮ್‌ಗೆ ರೆಡಿಯಾಗಿ ಎಂದು ಅಮಿತ್ ಶಾ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ. ಪವರ್‌ಫುಲ್ 20 ಲೀಡರ್‌ಗಳಿಗೆ 20 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಟಾಸ್ಕ್ ನೀಡಲಿದ್ದು, ತಾವು ಸ್ಪರ್ಧೆ ಮಾಡುವ ಕ್ಷೇತ್ರಗಳ ಜೊತೆ ಇನ್ನೊಂದು ಕ್ಷೇತ್ರ ಜವಾಬ್ದಾರಿಗೆ ಪ್ಲ್ಯಾನ್ ನಡೆದಿದೆ. 1+1 ಸೂತ್ರದಡಿಯಲ್ಲಿ ಟಿ20 ಟಾಸ್ಕ್ ಕೊಡಲು ಬಿಜೆಪಿ ಚಾಣಕ್ಯ ಭರ್ಜರಿ ಸಿದ್ಧತೆ ನಡೆಸಿದ್ದು, ಜನವರಿ ಕೊನೇ ವಾರದಲ್ಲಿ 1+1 ಕ್ಷೇತ್ರದ ಹಂಚಿಕೆ ಆಗುತ್ತಾ? ಆ 1+1 ಸೂತ್ರದಡಿ ಟಿ20 ಟಾಸ್ಕ್‌ನಲ್ಲಿ ಇರಲಿರುವ ಆ ಲೀಡರ್‌ಗಳು ಯಾರು? ಎಂಬ ಕುತೂಹಲ ಮನೆ ಮಾಡಿದೆ. ಬಿಜೆಪಿ ಚಾಣಕ್ಯನ ಕಡೇ ಆಜ್ಞೆ ಟಿ20 ಗೇಮ್ ಅಸಲಿಯತ್ತು ಏನು ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ – ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ: ಶಿವರಾಮ್ ಹೆಬ್ಬಾರ್
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


