ತುಮಕೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P Nadda) ಶುಕ್ರವಾರ (ಇಂದು) ತುಮಕೂರು ಜಿಲ್ಲೆಯಲ್ಲಿ ಎರಡನೇ ಸುತ್ತಿನ ಮತ ಬೇಟೆ ನಡೆಸಲಿದ್ದಾರೆ.ಉಪಾ ಚುನಾವಣೆ (By Election) ಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ಶಿರಾ ಕ್ಷೇತ್ರ (Sira Assembly constituency) ದಲ್ಲಿ ಜನ ಸಂಕಲ್ಪಯಾತ್ರೆ ನಡೆಸಿ ಇನ್ನಷ್ಟು ಭದ್ರಗೊಳಿಸಲು ಸಜ್ಜಾಗಿದೆ. ಪಾವಗಡ, ಕೊರಟಗೆರೆ, ಮಧುಗಿರಿ ಭಾಗದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಹಾಗಾಗಿ ಈ ಭಾಗದಲ್ಲಿ ಪಕ್ಷ ಬಲಗೊಳಿಸಲು ಸಜ್ಜಾದ ಬಿಜೆಪಿ ಶಿರಾದಲ್ಲಿ ಬೃಹತ್ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಇದನ್ನೂ ಓದಿ: ಬಿಜೆಪಿಯಿಂದ ಜಾತಿ ಸಮೀಕರಣ ವ್ಯೂಹ – ಮಠಯಾತ್ರೆ ಶುರು ಮಾಡಿದ ಬಿಜೆಪಿ ಅಧ್ಯಕ್ಷ ನಡ್ಡಾರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ಕಟೀಲ್ (Nalin Kumar Kateel), ಸಿಎಂ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಯಡಿಯೂರಪ್ಪ (B.S Yedityrappa) ಸೇರಿದಂತೆ ಘಟಾನುಘಟಿ ನಾಯಕರು ದಂಡೇ ಉಪಸ್ಥಿತಿ ಇರಲಿದೆ. ಜನ ಸಂಕಲ್ಪಯಾತ್ರೆ ಹಿನ್ನೆಲೆಯಲ್ಲಿ ಶಿರಾ ನಗರ ಸಂಪೂರ್ಣ ಕೇಸರಿಮಯವಾಗಿದೆ. ಶಾಸಕ ರಾಜೇಶ್ ಗೌಡರ ಉಸ್ತುವಾರಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


