ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನಾಯಿ ಮರಿಗೆ ಹೋಲಿಕೆ ವಿಚಾರದಲ್ಲಿ ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡ (G T Devegowda) ಪ್ರತಿಕ್ರಿಯಿಸಿದ್ದಾರೆ.ನಾಯಿಗೆ ನಾರಾಯಣಸ್ವಾಮಿ ಅಂತಾ ಕರೆಯುತ್ತಾರೆ. ನಮ್ಮ ಆದಿಚುಂಚನಗಿರಿ ಸ್ವಾಮೀಜಿ (Adichunchanagiri Swamiji) ಎರಡು ನಾಯಿ ಸಾಕಿದ್ದಾರೆ. ಆ ನಾಯಿಗಳು ದೊಡ್ಡವರು ಬಂದಾಗ ನಮಸ್ಕಾರ ಮಾಡುತ್ತವೆ. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಚಾಣಕ್ಯನ ಟಿ20 ಟಾಸ್ಕ್, ಎಲೆಕ್ಷನ್ ಗೇಮ್- ಯಾರೆಲ್ಲ ಲೀಡರ್ಸ್, ಪ್ಲೇಯರ್ಸ್?ನಾಯಿಗೆ ನಾವು ಮನುಷ್ಯರು ಸಮವಲ್ಲ. ಮಾತನಾಡುವವರು ಅವರ ಇತಿ ಮಿತಿ ಅರ್ಥ ಮಾಡಿಕೊಳ್ಳಲ್ಲ ಅದೇ ಸಮಸ್ಯೆ. ಅವರವರ ಕ್ಷೇತ್ರ ನೋಡಿಕೊಳ್ಳಲಾಗದವರು ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಜಿಟಿಡಿ ಪರೋಕ್ಷ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಮುತ್ಸದ್ದಿಗಳ ಬಾಯಲ್ಲಿ ಈ ರೀತಿ ಮಾತು ಸರಿಯಲ್ಲ ಎಂದರು. ಇದನ್ನೂ ಓದಿ: ಕೋಲಾರ ಸ್ಪರ್ಧೆ ಫಿಕ್ಸ್- ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


