ಬೆಂಗಳೂರು: ಯಾವಾಗ್ಲೂ ಪಿಜ್ಜಾ, ಬರ್ಗರ್, ಕೆಎಫ್‍ಸಿ ತಿಂದು ಬೋರಾದ ತಿಂಡಿ ಪ್ರಿಯರಿಗೆ ಈಗ, ಅವರೇ ಫುಡ್ ಸವಿಯೋ ಚಾನ್ಸ್. ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರಲ್ಲಿ ಅವರೇಮೇಳ (Bengaluru Avarebele Mela) ನಡೆಯುತ್ತಿದೆ.ಹೌದು. ಮಾಗಡಿ ರೈತರು ಹಾಗೂ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಬಸವನಗುಡಿ ನ್ಯಾಷನಲ್ ಗ್ರೌಂಡ್ ನಲ್ಲಿ ಅವರೆ ಮೇಳ ನಡೆಯುತ್ತಿದೆ. 23ನೇ ಅವರೆಬೇಳೆ ಮೇಳವನ್ನು, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿ (Sudhamurthy), ವಿಧಾನ ಪರಿಷತ್ ಸದಸ್ಯೆ ತಾರಾ (Thara), ನಟಿ ರೂಪಿಕಾ ಸೇರಿದಂತೆ ಇತರರು ಉದ್ಘಾಟಿಸಿದ್ರು. ಜನವರಿ 5 ರಿಂದ ಜನವರಿ 9 ರವರೆಗೆ ಐದು ದಿನಗಳ ಕಾಲ ಅವರೆಬೇಳೆ ಮೇಳ ನಡೆಯಲಿದೆ. ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಲಾಟರಿ ಮಾರಾಟ ಆರಂಭಿಸಿ – 15 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಲಾಟರಿ?ಅವರೆಬೇಳೆ ಮೇಳದಲ್ಲಿ ಹಿತಕಿದ ಅವರೆಬೇಳೆ ಖಾರ, ಅವರೆ ಬರ್ಫಿ, ನಿಪ್ಪಟ್, ಖಾಲಿ ದೊಸೆ, ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಹಿತಕಿದ ಅವರೆ ಬೇಳೆ ಜಾಮೂನು, ಹಿತಕಿದ ಅವರೆ ಬೇಳೆ ಹನಿ ಜಿಲೇಬಿ, ಅವರೇ ಬೇಳೆ ಬಜ್ಜಿ, ಹೋಳಿಗೆ ಸೇರಿದಂತೆ 150ಕ್ಕೂ ಹೆಚ್ಚು ಖಾದ್ಯಗಳನ್ನು ಸವಿದು ಎಂಜಾಯ್ ಮಾಡಬೋದು. ಅವರೇ ಬೆಳೆ ಕೇಕ್ ಈ ಬಾರಿಯ ಸ್ಪೆಷಲ್.ಒಟ್ಟಿನಲ್ಲಿ ಚುಮು ಚುಮು ಚಳಿಗೆ ಅವರೇಬೆಳೆ ಪುಡ್ಸ್ ಗಳು ಸಖತ್ ಟೆಸ್ಟ್ ಕೊಡ್ತಿದ್ದು, ತಿಂಡಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


