ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅನಾಹುತವೊಂದು ತಪ್ಪಿದ್ದು, ನಿಟ್ಟುಸಿರು ಬಿಡುವಂತಾಗಿದೆ.ಹೌದು. ಚಾಮುಂಡಿಬೆಟ್ಟ (Chamundi Hills) ದ ಬಸ್‌ ನಿಲ್ದಾಣದ ಸಮೀಪ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಅವಘಡ ತಪ್ಪಿದೆ. ಇದನ್ನೂ ಓದಿ: ಸ್ನಾನ ಮಾಡಿ ದೇವಸ್ಥಾನಕ್ಕೆ ಬಂದಿಲ್ಲವೆಂದು ಮಹಿಳೆ ಮೇಲೆ ಹಲ್ಲೆ, ಜೀವ ಬೆದರಿಕೆಗುಜರಾತ್ (Gujrat) ನಿಂದ ಬಸ್‍ನಲ್ಲಿ ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬಂದಿದ್ದರು. ಆದರೆ ಬೆಟ್ಟದ ಸಮೀಪ ಇರುವ ಬಸ್ (Bus Fire) ನಿಲ್ದಾಣದಲ್ಲಿ ಡಿಸೇಲ್ ಲೀಕೇಜ್ ನಿಂದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನ ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದ ಹಾಗೆ ಹೊಗೆ ಬರಲಾರಂಭಿಸಿದೆ. ಬಳಿಕ ಪೈಪ್ ನಿಂದ ಬೆಂಕಿ ಕಾಣಿಸಿಕೊಂಡಿದೆ.ಇದನ್ನು ಗಮನಿಸಿದ ಚಾಲಕ ಕೂಡಲೇ ಬೆಂಕಿಯ ಸಂಪರ್ಕದ ವಯರ್ ಗಳನ್ನು ಕಟ್ ಮಾಡಿದ್ದಾರೆ. ಇತ್ತ ಪ್ರವಾಸಿಗರನ್ನು ತಕ್ಷಣವೇ ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಪರಿಣಾಮ ಪ್ರಯಾಣಿಕರು ದೊಡ್ಡ ಅವಘಡದಿಂದ ಪಾರಾಗಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


