ರಾಯಚೂರು: ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್ (JDS) ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ದೇವೇಗೌಡರನ್ನಾಗಲಿ (Deve Gowda), ಕುಮಾರಣ್ಣನನ್ನಾಗಲಿ (H.D Kumarswamy), ಜೆಡಿಎಸ್ ಪಕ್ಷವನ್ನಾಗಲಿ ಏನೂ ಮಾಡಲು ಆಗಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಗುಡುಗಿದ್ದಾರೆ.ರಾಯಚೂರಿನ ಸಿಂಧನೂರಿನಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಹುಟ್ಟುಹಬ್ಬ ಸಮಾರಂಭ ಹಿನ್ನೆಲೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯಕ್ಕೆ ಅಮಿತ್ ಶಾ (AmitShah) ಅಥವಾ ಯಾರೇ ಬಂದ್ರೂ ಜೆಡಿಎಸ್ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಇಂದಿನಿಂದ ಕುಮಾರಣ್ಣ ಬೀದರ್‌ನಿಂದ ಯಾತ್ರೆ ಶುರು ಮಾಡಿದ್ದಾರೆ. ಎಲ್ಲೆಡೆಯೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ಧಿಕ್ಕರಿಸಿ ಈ ಬಾರಿ ಕುಮಾರಣ್ಣ ನಾಯಕತ್ವಕ್ಕೆ ಬೆಂಬಲಿಸುವ ಮಾತುಗಳು ಕೇಳಿಬರುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಪತ್ರ- ಚೆನ್ನೈನಲ್ಲಿ ಓರ್ವನ ಬಂಧನಎರಡು ಪಕ್ಷಗಳ ಬಗ್ಗೆ ನಾವು ಮಾತನಾಡಲು ಸಿದ್ಧರಿಲ್ಲ. ಜನಸಂಕಲ್ಪ ಯಾತ್ರೆಯೂ ನೀವೂ ನೋಡಿದ್ರಿ. ಭಾರತ್ ಜೋಡೋ ಯಾತ್ರೆಯೂ ನೋಡಿದ್ರಿ. ಬಿಜೆಪಿಯವರು ಯಾವ ಪುರುಷಾರ್ಥಕ್ಕೆ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರಿ? 40 ಪೆರ್ಸೆಂಟ್ ಲೂಟಿ ಹೊಡೆಯುತ್ತಿದ್ದೀರಿ. ರಾಜ್ಯದ ಜನರ ಬೊಕ್ಕಸ ಲೂಟಿ ಹೊಡೆಯಲು ಜನ ಸಂಕಲ್ಪ ಯಾತ್ರೆ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಭಾರತ್ ಜೋಡೋ (Bharat Jodo Yatra)  ಯಾತ್ರೆ ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆ ಆಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಆಗಿದ್ದಾಗಲೇ ಸ್ಯಾಂಟ್ರೋ ರವಿಯಿಂದ ಹೆಚ್ಚು ವ್ಯವಹಾರ: ಆರಗ ತಿರುಗೇಟುಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಹೆಚ್ಚಾಗಿ ಆಡಳಿತ ನಡೆಸಿವೆ. ಆದ್ರೆ ಕುಮಾರಣ್ಣ 34 ತಿಂಗಳಲ್ಲಿ ನೀಡಿದ ಕಾರ್ಯಕ್ರಮದ ಬಗ್ಗೆ ರಾಜ್ಯದ ಜನರು ಇವತ್ತೂ ಚರ್ಚೆ ಮಾಡುತ್ತಾರೆ. ಪಂಚರತ್ನ ಕಾರ್ಯಕ್ರಮ ಎಲ್ಲರಿಗೂ ಅನುಕೂಲವಾಗುವ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


