ಕಾರವಾರ: ರಾಜ್ಯದ ಅತಿ ಸೂಕ್ಷ್ಮ ಪ್ರದೇಶವಾದ ಭಟ್ಕಳ (Bhatkal) ನಗರದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವ ಕುರಿತು ಪೊಲೀಸರಿಗೆ ಬಹಿರಂಗ ಪತ್ರ ಬಂದಿದ್ದು, ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ (Chennai) ಕರ್ನಾಟಕ (Karnataka) ಮೂಲದ ವ್ಯಕ್ತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ಪೊಲೀಸ್‌ ಠಾಣೆಗೆ 2022ರ ಡಿ. 31ರಂದು ಅನಾಮಧೇಯ ಪತ್ರವೊಂದು (Letter) ಬಂದಿತ್ತು. ಆ ಪತ್ರದಲ್ಲಿ ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಉಲ್ಲೇಖಿಸಲಾಗಿತ್ತು. ಭಟ್ಕಳ ಅತಿ ಸೂಕ್ಷ್ಮ ಪ್ರದೇಶವಾದ್ದರಿಂದ ಈ ಪತ್ರ ಬಂದ ತಕ್ಷಣ ತನಿಖೆ ಪ್ರಾರಂಭಿಸಿದ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಪತ್ರ ಬಂದಿರುವ ಕುರಿತು ಮಾಹಿತಿ ಕಲೆ ಹಾಕಿದ್ದರು.ಇತ್ತ ಇದೇ ರೀತಿಯ ಬೆದರಿಕೆ ಪತ್ರವು ತಮಿಳುನಾಡಿನ ಚೆನ್ನೈ ಪೊಲೀಸರಿಗೂ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಚೆನ್ನೈ ಪೊಲೀಸರು ಕಾರ್ಯಮುಖರಾಗಿದ್ದಾರೆ. ಈ ವೇಳೆ ಅಂತರಾಜ್ಯ ಕಳ್ಳ ಹೊಸಪೇಟೆಯ ಕಮಲಾಪುರದ ಹನುಮಪ್ಪ ಲ್ಯಾಪ್‌ಟಾಪ್‌ವೊಂದನ್ನು ಕದ್ದು ಚೆನ್ನೈನ ಅಂಗಡಿಯೊಂದರಲ್ಲಿ ಮಾರಾಟ ಮಾಡಲು ಹೋಗಿದ್ದ. ಇದರಿಂದ ಅನುಮಾನಗೊಂಡ ಅಂಗಡಿಯಾತ ಲ್ಯಾಪ್‌ಟಾಪ್‌ನ ಪಾಸ್‌ವರ್ಡ್‌ ಕೇಳಿದಾಗ ಆತ ತಡಬಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಂಗಡಿಯಾತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದಾದ ಬಳಿಕ ಪೊಲೀಸರು ಹನುಮಪ್ಪನನ್ನು ಬಂಧಿಸಿದ್ದರು. ಇದನ್ನೂ ಓದಿ: ಇಬ್ಬರಿಗೂ ಕೈಮುಗಿದು ಪ್ರಾರ್ಥನೆ ಮಾಡ್ತೇನೆ, ಇಲ್ಲಿಗೆ ಡಾಗ್ ವಾರ್ ನಿಲ್ಲಿಸಿ ಪ್ಲಿಸ್: ಸಿಎಂ ಇಬ್ರಾಹಿಂಈ ವೇಳೆ ತನಿಖೆ ಮಾಡುವಾಗ ಹನುಮಪ್ಪನೇ ಬೆದರಿಕೆ ಪತ್ರ ಬರೆದಿರುವುದು ತಿಳಿದುಬಂದಿದ್ದು, ಚೆನ್ನೈ ಪೊಲೀಸರು ಭಟ್ಕಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಈತ ಭಟ್ಕಳ ಪೊಲೀಸರಿಗೆ ಬಾಂಬ್ ಬೆದರಿಕೆ ಪತ್ರ ಬರೆದ ಕುರಿತು ಭಟ್ಕಳ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ಹನುಮಪ್ಪ ಈವರೆಗೂ ಭಟ್ಕಳಕ್ಕೆ ಬಾರದೇ ಇಲ್ಲಿಯ ಬಗ್ಗೆ ಮಾಹಿತಿ ಸಹ ಇರದ ಪತ್ರ ಬರೆದಿದ್ದು ಯಾಕೆ? ಈತನಿಗೂ ಉಗ್ರವಾದಿಗಳಿಗೂ ಏನಾದ್ರು ಲಿಂಕ್ ಇದೆಯಾ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.ಘಟನೆಗೆ ಸಂಬಂಧಿಸಿ ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿದ ASP ಸಿ.ಟಿ ಜಯಕುಮಾರ್ ಅವರು, ಹೆಚ್ಚಿನ ತನಿಖೆಗಾಗಿ ಭಟ್ಕಳ ಪೊಲೀಸರು ತಮಿಳುನಾಡಿಗೆ ತೆರಳಿದ್ದು, ಹನುಮಪ್ಪನನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬಾಂಬ್ ಬೆದರಿಕೆ ಪತ್ರದಲ್ಲಿ ಚೆನ್ನೈ ಕಲೆದಾ- ನೆಕ್ಸ್ಟ್‌ ಟಾರ್ಗೆಟ್ ಡಿ. 25 ಆಂಡ್ ಹ್ಯಾಪಿ ನ್ಯೂ ಇಯರ್ 2023 ಬಾಂಬ್ ಬ್ಲಾಸ್ಟ್ ಎಂದು ನಮೋದಿಸಲಾಗಿದೆ. ಹೀಗಾಗಿ ಸಾಕಷ್ಟು ಅನುಮಾನಗಳು ಈ ಪತ್ರದಲ್ಲಿದ್ದು, ಮುಂದಿನ ತನಿಖೆ ನಂತರವೇ ಈತನ ಕೃತ್ಯದ ಬಗ್ಗೆ ಮಾಹಿತಿ ಹೊರಬೀಳಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕುಕ್ಕರ್ ಸ್ಫೋಟ ಕೇಸ್ – ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ, ಓರ್ವ ವಶ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


