ಆನೇಕಲ್: ಈಜಲು ಹೋಗಿ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಸರಾಂತ ಪ್ರವಾಸಿ ತಾಣ ಮುತ್ಯಾಲಮಡುವಿ (Muthyala Maduvu) ನಲ್ಲಿ ನಡೆದಿದೆ.ಜಿಗಣಿ ನಿವಾಸಿ ಜೋತಿಶ್ ಕುಮಾರ್ ಮೃತ ವ್ಯಕ್ತಿಯಾಗಿದ್ದು, ತನ್ನ ಎರಡು ವರ್ಷದ ಮಗನ ಜೊತೆಯಲ್ಲಿ ಮಧ್ಯಾಹ್ನ ಮುತ್ಯಾಲಮಡುವಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಮುತ್ಯಾಲಮಡು ಜಲಪಾತದ ಬಳಿಗೆ ತೆರಳಿ ಅಲ್ಲಿಯೇ ಮದ್ಯವನ್ನ ಸೇವಿಸಿ ಬಳಿಕ ಈಜಲು ಮುಂದಾಗಿದ್ದರು. ಇದನ್ನೂ ಓದಿ: ತುಂಗಾ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ಕೇಸ್‌ – ಐಸಿಸ್‌ ಸಂಪರ್ಕಿತರಿಂದ ಹಣ, ಇಬ್ಬರು ಅರೆಸ್ಟ್‌ಈ ವೇಳೆ ನೀರಿನಲ್ಲಿ ಮುಳುಗಿದ್ದ ಜ್ಯೋತಿಶ್ ಕುಮಾರ್ ಅಲ್ಲಿದ್ದ ಇತರೆ ಪ್ರವಾಸಿಗಳು ನೀರಿನಿಂದ ಹೊರತೆಗೆದಿದ್ದಾರೆ. ಅಷ್ಟರಲ್ಲಿ ಆಗಲೇ ಜ್ಯೋತಿಶ್ ಕುಮಾರ್ ಪ್ರಾಣಪಕ್ಷಿ ಹಾರಿಹೋಗಿದ್ದು, ಆನೇಕಲ್ ಪೋಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


