ಚಿಕ್ಕಬಳ್ಳಾಪುರ: ಜನವರಿ 7 ರಿಂದ 14ರವರೆಗೂ ದಸರಾ ಮಾದರಿಯಲ್ಲೇ ಚಿಕ್ಕಬಳ್ಳಾಪುರ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು‌, ಇದರ ಭಾಗವಾಗಿ ಗುರುವಾರ ಕ್ಲೀನ್ ಚಿಕ್ಕಬಳ್ಳಾಪುರ (Clean Chikkaballapur) ಅಭಿಯಾನಕ್ಕೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Sudhakar) ಚಾಲನೆ ನೀಡಿದರು.ಚಿಕ್ಕಬಳ್ಳಾಪುರ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿರಿಸಲು ಸಹಕಾರಿಯಾಗುವಂತೆ ಸ್ವಚ್ಛ ಚಿಕ್ಕಬಳ್ಳಾಪುರ ಅಭಿಯಾನಕ್ಕೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ (Chikkaballapur) ನಗರದ ಬಲಮುರಿ ವೃತ್ತದ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸಚಿವರು ಚಾಲನೆ‌ ನೀಡಿದರು. ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ನಗರ ಮಾಡಲು ಸುಧಾಕರ್ ಪ್ರಯತ್ನ‌ ಮಾಡುತ್ತಿದ್ದು, ಸಚಿವ ಸುಧಾಕರ್‌ಗೆ ಡಿಸಿ, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸಾಥ್‌ ನೀಡಿದರು. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಸ್ಥಿ ಸಂಗ್ರಹ- ಭಾನುವಾರ ಕೂಡಲಸಂಗಮ, ಗೋಕರ್ಣದ ಸಾಗರದಲ್ಲಿ ವಿಸರ್ಜನೆಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಹಾಗೂ ಕಸ ವಿಂಗಡಣೆ ಕರಪತ್ರ ಅಂಟಿಸಿ ಸುಧಾಕರ್ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.‌ ಇಡೀ ಕ್ಷೇತ್ರದಲ್ಲಿ ಕ್ಲೀನ್ ಚಿಕ್ಕಬಳ್ಳಾಪುರ ಸ್ವಚ್ಛ ಅಭಿಯಾನ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಮಹಿಳಾ ಕಾರ್ಯಕರ್ತೆಯರು – ಇಬ್ಬರ ಬಂಧನ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


