ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‌ ಡಿ. ಕುಮಾರಸ್ವಾಮಿ (HD Kumaraswamy) ಹೇಳಿಕೆಯ ಬಳಿಕ ಸ್ಯಾಂಟ್ರೋ ರವಿ (Santro Ravi) ಯಾರು ಎನ್ನುವುದು ನನಗೆ ಗೊತ್ತಾಯಿತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.ಕೋರಮಂಗಲ ಕೆಎಸ್‌ಆರ್‌ಪಿ(KSRP) ಮೈದಾನದಲ್ಲಿ ನಡೆದ ಪೊಲೀಸರಿಗೆ (Police) ಪದಕ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ಹೇಳಿಕೆ ಗಮನಿಸಿದರೆ ಸ್ಯಾಂಟ್ರೋ ರವಿ ಹೆಚ್ಚು ಅವರ ಸಂಪರ್ಕದಲ್ಲಿ ಇದ್ದರೇನೋ ಅನಿಸುತ್ತಿದೆ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ ಹೆಚ್ಚು ವ್ಯವಹಾರ ಮಾಡಿಕೊಂಡಿರುವುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಲಾಟರಿ ಮಾರಾಟ ಆರಂಭಿಸಿ – 15 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಲಾಟರಿ?ನನ್ನ ಜೊತೆ ಸ್ಯಾಂಟ್ರೋ ರವಿ ಇರುವ ಪೋಟೋವನ್ನು ಬಿಡುಗಡೆ ಮಾಡಿದ್ದಾರೆ. ನಾನು ಜನಪ್ರತಿನಿಧಿಯಾಗಿರುವ ಕಾರಣ ನನ್ನ ಬಳಿ ನೂರಾರು ಜನ ಬಂದು ಪೋಟೋ ತೆಗೆಸಿಕೊಳ್ಳುತ್ತಾರೆ. ಯಾರು ಏನು ಅಂತ ನೋಡಿಕೊಂಡು ಇರುವುದಕ್ಕೆ ಆಗುವುದಿಲ್ಲ. ಅದ್ದರಿಂದ ಕುಮಾರ ಸ್ವಾಮಿ ಚುನಾವಣೆಯ ಸಂದರ್ಭದಲ್ಲಿ ಇಲ್ಲ ಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಸೂಕ್ತ ದಾಖಲೆ ಇಟ್ಟು ಮಾತನಾಡಬೇಕು ಎಂದು ಹೇಳಿದರು.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


