ಕಲಬುರಗಿ: ಪಿಎಸ್‍ಐ ಪರೀಕ್ಷಾ ಅಕ್ರಮದಲ್ಲಿ (PSI Recruitment Scam) ಭಾಗಿಯಾಗಿ ಜೈಲು ಪಾಲಾದ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ (Divya Hagaragi) ಸೇರಿ 26 ಜನ ಆರೋಪಿಗಳಿಗೆ (Accused) ಜಾಮೀನು ಮಂಜೂರಾಗಿದೆ. ಇಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು (Bail) ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.ಪಿಎಸ್‍ಐ ಅಕ್ರಮ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ 26 ಜನರಿಗೆ ಜಾಮೀನು ಮಂಜೂರಾಗಿದೆ. ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಕೆ. ಬಿ. ಪಾಟೀಲ್ 26 ಮಂದಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್‌ ಪೌಲ್ ಅರೆಸ್ಟ್‌ಏನಿದು ಪ್ರಕರಣ?
2021ರ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಪಿಎಸ್‍ಐ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮತ್ತು ತಂಡ ಹಣ ಬಲ ಹೊಂದಿರುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿತ್ತು. ಲಕ್ಷಾಂತರ ರೂ. ನೀಡಿದವರ ಪರವಾಗಿ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಸಹಕಾರ ನೀಡಿತ್ತು. ಪರೀಕ್ಷೆ ಮುಗಿದ ಬಳಿಕ ಕ್ಯಾಮೆರಾವನ್ನು ಬಂದ್ ಮಾಡಿ ಬಳಿಕ ಅಭ್ಯರ್ಥಿಗಳ ಒಎಂಆರ್ ಶೀಟ್‍ಗೆ ಸರಿ ಉತ್ತರವನ್ನು ಭರ್ತಿ ಮಾಡಲಾಗಿತ್ತು. ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದು ಎಡಿಜಿಪಿ ಅಮೃತ್ ಪೌಲ್, ದಿವ್ಯಾ ಹಾಗರಗಿ ಸೇರಿದಂತೆ ಹಲವು ಮಂದಿ ಬಂಧನಕ್ಕೊಳಗಾಗಿದ್ದರು. ಇದನ್ನೂ ಓದಿ: ಬಾಲಕನ ಕಿಡ್ನಾಪ್ – ಸಿಂಗಂ ಸ್ಟೈಲ್‌ನಲ್ಲಿ ಬಾಲಕನನ್ನು ರಕ್ಷಿಸಿದ ಸಿಪಿಐ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


