ಬೆಂಗಳೂರು: ಕಾಸಿಲ್ಲದೆ ಯಾವುದೂ ನಡೆಯಲ್ಲ ಎಂಬುದು ವಿಧಾನಸೌಧದ ಪ್ರತಿಯೊಂದು ಗೋಡೆಗೂ ಗೊತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿಧಾನಸೌಧ (VidhanaSoudha) ದಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಫೈಲ್ ಮೂವ್ ಗೆ ಕಮಿಷನ್ ನೀಡಬೇಕು. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ದಯಾಮರಣ ಕೇಳಿದ್ದಾರೆ. ವಿರೋಧ ಪಕ್ಷಕ್ಕೆ ಎಲ್ಲ ಮಾಹಿತಿ ಬಂದಿದೆ. ನಾವು ಅದನ್ನ ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ ಎಂದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ ಪ್ರಕರಣ – ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿ 26 ಆರೋಪಿಗಳಿಗೆ ಜಾಮೀನುಸತ್ಯ ಹೊರಗೆ ಬರಬೇಕು. ತನಿಖೆಯಾಗಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ. ರಾಜ್ಯಕ್ಕೆ ಭ್ರಷ್ಟಾಚಾರ ಕಳಂಕ ಬಂದಿದೆ. ಇನ್ನೂ 60 ದಿನ ಮಾತ್ರ ಈ ಸರ್ಕಾರ ಇರುತ್ತೆ. ಆಮೇಲೆ ಕಾಂಗ್ರೆಸ್ ಸರ್ಕಾರ (Congress Government) ಬರುತ್ತೆ. ದಾಖಲೆ ಕೊಡಿ ಅಂತಾರೆ ಇದು ದಾಖಲೆ ಅಲ್ವಾ..? ಯಡಿಯೂರಪ್ಪ ಆಪ್ತರ ಮನೆಯಲ್ಲಿ ಹಣ ಸಿಗಲಿಲ್ವಾ..? ದುಡ್ಡು ಜೇಬಿನಿಂದ ತೆಗೆದು ಕೊಡೊದಕ್ಕೆ ಸಾಕ್ಷಿ ಕೊಡೋಕೆ ಆಗುತ್ತಾ..? ಇನ್ನೇನೂ ಸಚಿವರ ರಾಜೀನಾಮೆ ಕೇಳುವುದು. ಕೆಲವೇ ಕೆಲವು ದಿನ ಅಷ್ಟೆ ಸರ್ಕಾರಕ್ಕೆ ಇದೆ ಎಂದು ಹೇಳಿದರು.40%-50% ಕಮಿಷನ್ ತಗೋತ್ತಿದ್ದಾರೆ. ಅನೇಕ ಘಟನೆಗಳು ಮಾಹಿತಿ ನಮಗೆ ಬರುತ್ತಿದೆ. ಜನರ ಧ್ವನಿ ಪ್ರಜೆಗಳ ಧ್ವನಿಯಾಗಿ ನಾವು ತೆಗೆದುಕೊಂಡು ಹೋಗ್ತೀವಿ. ಮಂತ್ರಿಗಳ ಮನೆಯಿಂದ ಫೋನ್ ಬಂತು ಅಂತ ಹಣ ಇದ್ದವನನ್ನು ಬಿಟ್ಟು ಕಳಿಸಿದ್ದಾರೆ. 40% ಕಮಿಷನ್ ಗೆ ಇದೇ ದುಡ್ಡು ದಾಖಲೆ ಅಲ್ವೇನ್ರಿ..?. ಜನ ಯಾವ ರೀತಿ ಸಾಯ್ತಿದ್ದಾರೆ ಎನ್ನೋದಕ್ಕೆ ಮಹದೇವಪುರ ಘಟನೆ ಸಾಕ್ಷಿ ಎಂದು ತಿಳಿಸಿದರು.ಸರ್ಕಾರ ಎಲ್ಲಿದೆ? ಇನ್ನು 60 ದಿನ ಮಾತ್ರ ಸರ್ಕಾರ ಇರುತ್ತೆ. ಮ್ಯಾನಿಫೆಸ್ಟೋ ಬಜೆಟ್ ಮಾಡಿ ಹೋಗ್ತಾರೆ ಅಷ್ಟೇ ಎಂದು ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತ- ಜ. 9ಕ್ಕೆ ಅಧಿಕೃತ ಘೋಷಣೆ?
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


