ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ `ಯುಐ’ (Ui) ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಉಪ್ಪಿಗೆ ನಾಯಕಿಯಾಗಿ ಕನ್ನಡದ ನಟಿ ರೀಷ್ಮಾ (Reeshma Nanaih) ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.ಉಪೇಂದ್ರ ನಟನೆಯ ನಿರೀಕ್ಷಿತ ಸಿನಿಮಾ `ಯುಐ’ ಚಿತ್ರವು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿ ಮಾಡುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ನಾಯಕಿ ಯಾರೆಂಬುದು ಇದೀಗ ಫೈನಲ್ ಆಗಿದೆ. ಸಾಕಷ್ಟು ಬಾಲಿವುಡ್ (Bollywood) ನಟಿಮಣಿಯರ ಹೆಸರು ಸುದ್ದಿಯಾಗಿದ್ದ ಬೆನ್ನಲ್ಲೇ ನಟಿ ರೀಷ್ಮಾ, ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಈ ಮೂಲಕ ಕನ್ನಡದ ಪ್ರತಿಭಾನ್ವಿತ ನಟಿಗೆ ಚಿತ್ರತಂಡ ಅವಕಾಶ ಕೊಟ್ಟಿದೆ.ಇನ್ನೂ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ ಅವರು ಸಖತ್ ಸ್ಕೋಪ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಈ ಚಿತ್ರಕ್ಕೆ ಲಹರಿ ಫಿಲ್ಮ್ಸ್‌(Lahari Films), ನಿರ್ಮಾಪಕ ಶ್ರೀಕಾಂತ್ (Srikanth) ಅವರು ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ ಆಮೀರ್ ಖಾನ್ಉಪ್ಪಿ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಬೆಟ್ಟದಷ್ಟಿದೆ. ಸ್ಟಾರ್ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. `ಯುಐ’ (Ui) ಸಿನಿಮಾ ತೆರೆಯ ಮೇಲೆ ಅಬ್ಬರಿಸೋದನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


