ಬೆಳಗಾವಿ: ಸವದತ್ತಿ ಯಲ್ಲಮ್ಮನ (Savadatti Yellamma) ದರ್ಶನಕ್ಕೆ ಹೋಗುತ್ತಿದ್ದ ವಾಹನ (Vehicle) ರಾಮದುರ್ಗ ತಾಲೂಕಿನ ಚಿಂಚನೂರು ವಿಠಲ್ ದೇವಸ್ಥಾನದ ಬಳಿ ಭೀಕರ ಅಪಘಾತವಾಗಿ (Accident) ಆರು ಜನ ಮೃತಪಟ್ಟ ಘಟನೆ ನಡೆದಿದೆ.ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಹನಮವ್ವ ಮ್ಯಾಗಾಡಿ (25), ದೀಪಾ (31), ಸವಿತಾ (17), ಸುಪ್ರೀತಾ (11), ಮಾರುತಿ (42), ಇಂದ್ರವ್ವ (24) ಮೃತರು. ಮೃತರೆಲ್ಲರೂ ಸವದತ್ತಿ ರೇಣುಕಾ ಯಲ್ಲಮ್ಮನ ದೇವಿ ದರ್ಶನಕ್ಕೆ ನಡೆದುಕೊಂಡು ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಬಂದ ಮಹೇಂದ್ರ ಗೂಡ್ಸ್ ವಾಹನ ಚಾಲಕ ಮೃತರೆಲ್ಲರನ್ನೂ ತನ್ನ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಆಲದ ಮರಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ನಗರ ಸಜ್ಜು- ಶುಕ್ರವಾರದಿಂದ 3 ದಿನಗಳ ಕಾಲ ಕನ್ನಡ ಹಬ್ಬಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಐವರು ಭಕ್ತರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಸ್ಥಳದಲ್ಲೇ ಬಿಡುಬಿಟ್ಟಿರುವ ಬೆಳಗಾವಿ ಎಸ್ಪಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಯರಗಟ್ಟಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ:  ಇಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ- ಭಕ್ತರಿಗೆ ಕೊಡಲ್ಲ ಪೂಜ್ಯರ ಚಿತಾಭಸ್ಮ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


