ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆಗಸ್ಟ್ 12ರ ವರೆಗೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಜೊತೆಗೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ಎಚ್ಚರಿಸಿದೆ. ಚಿಕ್ಕಬಳ್ಳಾಪುರ, ಉಡುಪಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ ಜಿಲ್ಲೆಗಲ್ಲಿ ಕೊಂಚ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 29-24
ಶಿವಮೊಗ್ಗ: 31-22
ಬೆಳಗಾವಿ: 28-21
ಮೈಸೂರು: 29-21ಮಂಡ್ಯ: 31-22
ಮಡಿಕೇರಿ: 24-17
ರಾಮನಗರ: 31-22
ಹಾಸನ: 28-20
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 29-21ಕೋಲಾರ: 30-22
ತುಮಕೂರು: 29-22
ಉಡುಪಿ: 29-24
ಕಾರವಾರ: 29-25
ಚಿಕ್ಕಮಗಳೂರು: 27-19
ದಾವಣಗೆರೆ: 31-22ಹುಬ್ಬಳ್ಳಿ: 31-22
ಚಿತ್ರದುರ್ಗ: 31-22
ಹಾವೇರಿ: 31-22
ಬಳ್ಳಾರಿ: 34-24
ಗದಗ: 31-26
ಕೊಪ್ಪಳ: 32-23ರಾಯಚೂರು: 34-25
ಯಾದಗಿರಿ: 34-25
ವಿಜಯಪುರ: 32-23
ಬೀದರ್: 31-23
ಕಲಬುರಗಿ: 33-24
ಬಾಗಲಕೋಟೆ: 33-23Sign in to your account
Username or Email Address


Password

 Remember Me


