ಮೈಸೂರು: ಟೀಂ ಇಂಡಿಯಾ (Tean India) ಆಟಗಾರ ಕೆ.ಎಲ್ ರಾಹುಲ್ (KL Rahul) ಮೈಸೂರಿಗೆ (Mysuru) ಆಗಮಿಸಿ ಚಾಮುಂಡಿ ತಾಯಿ (Chamundeswari Temple) ದರ್ಶನ ಪಡೆದಿದ್ದಾರೆ.ಶ್ರೀಲಂಕಾ (Sri Lanka) ವಿರುದ್ಧದ ಟಿ20 ಸರಣಿಯಿಂದ ಬಿಡುವು ಪಡೆದಿರುವ ರಾಹುಲ್ ತಮ್ಮ ಮದುವೆ ತಯಾರಿಯಲ್ಲಿದ್ದಾರೆ. ಈಗಾಗಲೇ ನಟಿ ಆಥಿಯಾ ಶೆಟ್ಟಿ (Athiya Shetty) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ರಾಹುಲ್ ಇಂದು ಮೈಸೂರಿಗೆ ಆಗಮಿಸಿ ತಾಯಿ ಚಾಮುಂಡಿ ದೇವಿ ದರ್ಶನ ಪಡೆದು ಹೋಗಿದ್ದಾರೆ. ಇದನ್ನೂ ಓದಿ: ವೈಡ್ ಕೊಡದ ಅಂಪೈರ್‌ಗೆ ನಿಂದಿಸಿದ ದೀಪಕ್ ಹೂಡಾಸದ್ಯ ಈ ತಿಂಗಳಾಂತ್ಯದಲ್ಲಿ ರಾಹುಲ್, ಆಥಿಯಾ ಶೆಟ್ಟಿ ಜೋಡಿ ಸಪ್ತಪದಿ ತುಳಿಯಲಿದೆ ಎಂದು ಆಪ್ತ ಮೂಲಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ರಾಹುಲ್ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಇದನ್ನೂ ಓದಿ: ‘ಪಠಾಣ್’ ಸಿನಿಮಾದ ಅಶ್ಲೀಲ ಕಂಟೆಂಟ್ ತೆಗೆಯುವಂತೆ ಡಿಜಿಪಿಗೆ ಪತ್ರಸದ್ಯ ಬಿಡುವಿನಲ್ಲಿರುವ ರಾಹುಲ್ ಶ್ರೀಲಂಕಾ ವಿರುದ್ಧದ ಏಕದಿನ ತಂಡಕ್ಕೆ ಆಯ್ಕೆಗೊಂಡಿದ್ದು, ಜ.10 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ. ಜ.10, 12 ಮತ್ತು 15 ರಂದು ಏಕದಿನ ಪಂದ್ಯ ನಡೆಯಲಿದೆ. ಈ ಸರಣಿಯಲ್ಲಿ ರಾಹುಲ್ ಆಡಲಿದ್ದಾರೆ. ಆ ಬಳಿಕ ಮದುವೆ ನಡೆಯುವ ಸಾಧ್ಯತೆ ಇದೆ.
Sign in to your account
Username or Email Address


Password

 Remember Me


