ಬೀದರ್: ಉಸ್ಮಾನಿಯಾ ಬಿಸ್ಕೆಟ್ (Biscuit) ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 88,920 ರೂಪಾಯಿ ಮೌಲ್ಯದ ಬಿಸ್ಕೆಟ್ ಅನ್ನು ಕಳ್ಳರಿಂದ ಪೊಲೀಸರು ಜಪ್ತಿ ಮಾಡಿದ್ದಾರೆ.ಹೈದರಾಬಾದ್ (Hyderabad) ನಿಂದ ಬೀದರ್ ಗೆ ಬಿಸ್ಕೆಟ್ ಡೆಲಿವರಿ ಮಾಡಲು ಬಂದಾಗ ಕಳವು ಮಾಡಲಾಗಿತ್ತು. ಬೀದರ್ (Bidar) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಭಂಗೂರು ಬಳಿ ಗಾಡಿ ನಿಲ್ಲಿಸಿ ಊಟಕ್ಕೆ ಕುಳಿತಾಗ ಖದೀಮರು 114 ಬಿಸ್ಕೆಟ್ ಬಾಕ್ಸ್ ಕದ್ದು ಪರಾರಿಯಾಗಿದ್ದರು. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಬೆನ್ನಲ್ಲೇ ಖದೀಮರ ಬೆನ್ನು ಬಿದ್ದ ಮನ್ನಳ್ಳಿ ಪೊಲೀಸರು ಮೂರು ದಿನಗಳಲ್ಲೇ ಬಿಸ್ಕೆಟ್ ಕಳ್ಳರನ್ನು ಬಂಧಿಸಿದ್ದಾರೆ. ಇದೀಗ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ
Sign in to your account
Username or Email Address


Password

 Remember Me


