ಗದಗ: ವಿಜಯಪುರ (Vijayapura) ದ ಸಿದ್ದೇಶ್ವರ ಶ್ರೀಗಳ ದರ್ಶನ ಮಾಡುವ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನುವ ನೋವಾಗುತ್ತಿದೆ ಎಂದು ಶಾಸಕ ಜಮೀರ್ ಅಹ್ಮದ್ (Zameer Ahmed Khan) ಸಂತಾಪ ಸೂಚಿಸಿದ್ದಾರೆ.ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿ, ಗದಗನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಸ್ವಾಮೀಜಿಗಳನ್ನ ನೋಡಲು ಹರಿದುಬರುತ್ತಿರುವ ಅಷ್ಟು ಜನ ಸಾಗರವನ್ನ ನಾನು ಯಾವತ್ತೂ ನೋಡೇ ಇಲ್ಲ. ನನಗೆ ಸ್ವಾಮೀಜಿಗಳ ಬಗ್ಗೆ ಗೌರವ, ಅಭಿಮಾನವಿದೆ ಎಂದರು.ನಾನು ಕೂಡಾ ಸ್ವಾಮೀಜಿ ನೋಡೋಕೆ ಮೊನ್ನೆ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಹೋಗಬೇಕಿತ್ತು. ಆದರೆ ಕಾರಣಾಂತರದಿಂದ ಹೋಗೋಕೆ ಆಗಲಿಲ್ಲ. ಅವರ ದರ್ಶನ ಮಾಡೋಕೂ ಪುಣ್ಯ ಮಾಡಿರಬೇಕು. ಆ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನೋ ನೋವು ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಭರದ ಸಿದ್ಧತೆ- ಸಂಜೆ 5 ಗಂಟೆ ವೇಳೆಗೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶಮನೆಯಲ್ಲಿ ಯಾರೋ ತೀರಿಕೊಂಡಿರುವ ಹಾಗೆ ಜನ ಕಣ್ಣೀರು ಹಾಕುತ್ತಿದ್ದಾರೆ. ಅವರ ಅನುಯಾಯಿಗಳಿಗೆ ಭಗವಂತ ಸಹಿಸಿಕೊಳ್ಳೋ ಶಕ್ತಿ ಕೊಡಲಿ. ಹಗರಿ ಬೊಮ್ಮನಹಳ್ಳಿಯಲ್ಲೂ ಕಾರ್ಯಕ್ರಮ ಇದೆ. ಸ್ವಾಮೀಜಿಗಳ ಅಂತ್ಯಕ್ರಿಯೆಗೆ ಹೋಗೋ ಪ್ರಯತ್ನ ಮಾಡ್ತೇನೆ ಎಂದರು.
Sign in to your account
Username or Email Address


Password

 Remember Me


