ಬಿಗ್ ಬಾಸ್ ಸೀಸನ್ 8ರಲ್ಲಿ ಪ್ರೇಮ ಪಕ್ಷಿಗಳಾಗಿ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆಪಿ (Aravind Kp) ಹೈಲೈಟ್ ಆಗಿದ್ದರು. ಬಳಿಕ ಬಿಗ್ ಬಾಸ್ ಸೀಸನ್ 9ಕ್ಕೆ ದಿವ್ಯಾ ಕಾಲಿಟ್ಟಿದ್ದರು. ಇದೀಗ ದೊಡ್ಮನೆಯ ಆಟಕ್ಕೆ ಬ್ರೇಕ್ ಬಿದ್ದಿದೆ. ಈ ಬೆನ್ನಲ್ಲೇ ದಿವ್ಯಾ, ಅರವಿಂದ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ವಿಶೇಷ ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ.ಸೀಸನ್ 9 ಬಿಗ್ ಬಾಸ್‌ನ್ಲೂ (Bigg Boss Kannada 9) ದಿವ್ಯಾ ಉರುಡುಗ ಮಿಂಚಿದ್ದರು. ಕಳೆದ ಸೀಸನ್‌ನಲ್ಲಿ ಅರವಿಂದ್ (Aravind) ಜೊತೆ ಹೈಲೈಟ್ ಆಗಿದ್ದ ದಿವ್ಯಾ ಈ ಬಾರಿ ಒಂಟಿಯಾಗಿ ಆಟವಾಡಿ ಟಾಪ್‌ 5 ಫೈನಲಿಸ್ಟ್‌ನಲ್ಲಿ ಒಬ್ಬರಾಗಿದ್ದರು. ಬಳಿಕ ಐದನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಇದ್ದ ಕಾರಣ ಅರವಿಂದ್ ಬರ್ತ್‌ಡೇ ಮಿಸ್ ಆಗಿತ್ತು. ಈಗ ಅರವಿಂದ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಇದನ್ನೂ ಓದಿ: ಗಡಿನಾಡ ಕನ್ನಡಿಗ ವಿವಾದದ ಬಗ್ಗೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆದೇಶವೇ ಬೆನ್ ತಟ್ಟೋ ಭಾಗ್ಯದ ನಿಧಿ ನೀ, ನೀ ನಗುವಿಗೆ ನಾಯಕ ನೀ ಕೋಟಿ ಮನಸಿಗೆ ಸ್ಫೂರ್ತಿ..ನೀ ಅರವಿಂದ್ ಕೆಪಿ ಎಂದು ದಿವ್ಯಾ ಉರುಡುಗ ಹಾಡಿ ಹೊಗಳಿದ್ದಾರೆ. ಈ ಮೂಲಕ ಅವಿ ಹುಟ್ಟುಹಬ್ಬಕ್ಕೆ ದಿವ್ಯಾ ವಿಶ್‌ ಮಾಡಿದ್ದಾರೆ. ಇನ್ನೂ ಈ ಸೀಸನ್‌ನಲ್ಲಿ ಕವಿತೆ ವಿಚಾರದಲ್ಲಿ ರಾಜಣ್ಣ ಮತ್ತು ದಿವ್ಯಾ ನಡುವೆ ಜಗಳ ಆಗಿತ್ತು. ಸಾಂಗ್ ಬರೆಯಲು ನಾನು ಸಹಾಯ ಮಾಡಿದ್ದೆ, ಆದರೆ ನನಗೆ ಕ್ರೆಡಿಟ್ ಕೊಡಲಿಲ್ಲ ಎಂದಿದ್ರು. ಅದಕ್ಕೆ ಅರವಿಂದ್‌ಗಾಗಿ ಬರೆದ ಸಾಲುಗಳು ನನ್ನದೇ. ಇದರ ಕ್ರೆಡಿಟ್ ನನಗೆ ಮಾತ್ರ ಸಲ್ಲಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.  A post shared by DU✨ (@divya_uruduga)ಇನ್ನೂ ದಿವ್ಯಾ ಮತ್ತು ಅರವಿಂದ್ ಇಬ್ಬರು ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ಹಸೆಮಣೆ (Wedding) ಏರಲಿದ್ದಾರೆ.
Sign in to your account
Username or Email Address


Password

 Remember Me


