ಬಿಗ್ ಬಾಸ್ ಮನೆಯಲ್ಲಿ (Bigg Boss House) ಲವ್ ಬರ್ಡ್ಸ್ ಆಗಿ ಸಾನ್ಯ (Sanya Iyer), ರೂಪೇಶ್ ಶೆಟ್ಟಿ (Roopesh Shetty) ಹೈಲೈಟ್ ಆಗಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಈ ವೇಳೆ ಸಾನ್ಯ ಮನೆ ಕಡೆಯಿಂದ ಮದುವೆ (Wedding) ಪ್ರಪೋಸಲ್ ಬಂದರೆ ರೂಪೇಶ್ ಶೆಟ್ಟಿ ಉತ್ತರ ಏನಾಗಿರುತ್ತದೆ ಎಂಬುದನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ.ದೊಡ್ಮನೆಯ ಒಟಿಟಿ ಮತ್ತು ಟಿವಿ ಬಿಗ್‌ ಬಾಸ್‌ 142 ದಿನಗಳ ಆಟವನ್ನ ಪೂರೈಸಿ ರೂಪೇಶ್ ಗೆದ್ದು ಬಂದಿದ್ದಾರೆ. ಬಳಿಕ ಬಿಗ್ ಬಾಸ್ ಮನೆಯ ಜರ್ನಿ, ಸಾನ್ಯ ಬಗ್ಗೆ ಸಾಕಷ್ಟು ವಿಚಾರಗಳನ್ನ ಮಾತನಾಡಿದ್ದಾರೆ. ಒಟಿಟಿಯಿಂದ ಪರಿಚಿತರಾದ ಸಾನ್ಯ, ರೂಪೇಶ್ ಗೆಳೆತನ ಪ್ರೇಕ್ಷಕರ ಗಮನ ಸೆಳೆದಿತ್ತು. ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿರೋದನ್ನ ನೋಡಿ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದೇ ಭಾವಿಸಲಾಗಿತ್ತು. ಇದಕ್ಕೆಲ್ಲ ಉತ್ತರ ಈಗ ರೂಪೇಶ್ ಶೆಟ್ಟಿ ನೀಡಿದ್ದಾರೆ. ಇದನ್ನೂ ಓದಿ: ರೂಪೇಶ್ ಗೆ ಬಿಗ್ ಬಾಸ್ ಕೊಟ್ಟಿದ್ದು 60 ಲಕ್ಷ: ನಿಜವಾಗಿಯೂ ಅವರ ಕೈಗೆ ಬರೋದೆಷ್ಟು?ಫ್ರೆಂಡ್‌ಗಿಂತ ಫ್ರೆಂಡ್‌ಗೆನೇ ತುಂಬಾ ವ್ಯಾಲ್ಯೂ ಕೊಡುತ್ತೀನಿ. ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಮದುವೆ ಅನ್ನೋ ವಿಚಾರ ನನ್ನ ತಲೆಗೆ ಬಂದಿಲ್ಲ. ಬಿಗ್ ಬಾಸ್ 9ರ ವಿನ್ನರ್ ಆಗಿ ದೊಡ್ಡ ಸಕ್ಸಸ್ ಕೊಟ್ಟಿದೆ. ಈ ಸಕ್ಸಸ್‌ನಿಂದ ತುಂಬಾ ಕೆಲಸ ಮಾಡಬೇಕು. ಹಾಗಾಗಿ ನಾನು ಮದುವೆಯ ಪ್ಲ್ಯಾನ್‌ನಲ್ಲಿ ಇಲ್ಲ.ಈ ಮೂಲಕ ಸಾನ್ಯ ಜೊತೆಗಿನ ಲವ್ ರಿಲೇಷನ್‌ಶಿಪ್ ವದಂತಿಯ ಬಗ್ಗೆ ರೂಪೇಶ್ ಶೆಟ್ಟಿ ಬ್ರೇಕ್ ಹಾಕಿದ್ದಾರೆ.
Sign in to your account
Username or Email Address


Password

 Remember Me


