ಧಾರವಾಡ: ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಡೆತನದ ಶ್ರೀ ಬೀರೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ (Shri Beereshwar Co-Op Credit Society) ಜನವರಿ 1ರ ತಡರಾತ್ರಿ ಕಳ್ಳತನವಾಗಿದೆ.ಧಾರವಾಡದ (Dharwad) ಕೋರ್ಟ್ ವೃತ್ತದ ಬಳಿ ಇರುವ ಬ್ಯಾಂಕ್‌ಗೆ ಖದೀಮರು ನಿನ್ನೆ ಕನ್ನ ಹಾಕಿದ್ದಾರೆ. ಬ್ಯಾಂಕ್‌ನಲ್ಲಿದ್ದ ಸುಮಾರು 20 ಲಕ್ಷ ನಗದು ಹಾಗೂ 40 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಮನೆ ಸಮೀಪ ಬಾಂಬ್‌ ಪತ್ತೆ – ಸ್ಥಳಕ್ಕೆ ದೌಡಾಯಿಸಿದ ಬಾಂಬ್‌ ನಿಷ್ಕ್ರಿಯ ದಳ ಖದೀಮರು ತಮ್ಮ ಗುರುತು ಪತ್ತೆಯಾಗಬಾರದು ಎಂದು ಸಿಸಿಟಿವಿ (CCTV) ಹಾಗೂ ಬ್ಯಾಂಕ್‌ನಲ್ಲಿದ್ದ ದಾಖಲೆಗಳನ್ನೂ ಸುಟ್ಟು ಹಾಕಿದ್ದಾರೆ. ಸಿಸಿಟಿವಿಯ ಡಿವಿಆರ್ ಅನ್ನೂ ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಧಾರವಾಡದ ಶಹರ ಠಾಣೆ ಪೊಲೀಸರು ಹಾಗೂ ಎಸಿಪಿ ವಿಜಯಕುಮಾರ ತಳವಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ. ಕಳ್ಳರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
Sign in to your account
Username or Email Address


Password

 Remember Me


