ಬೆಳಗಾವಿ: ಗುಟ್ಕಾ (Gutka) ತಿಂದು ಉಗುಳಿದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟು ಗಲಾಟೆಗೆ ತಿರುಗಿ ಕೊಲೆಯಲ್ಲಿ (Murder) ಅಂತ್ಯವಾಗಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳದಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಮಂಜುನಾಥ್ ಸುಣಗಾರ(45) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಗುಟ್ಕಾ ತಿಂದು ಉಗುಳಿದ ವಿಚಾರಕ್ಕೆ ಮಂಜುನಾಥ್‌ಗೆ ಅಜಯ್ ಹಿರೇಮಠ (25) ಎಂಬವನೊಂದಿಗೆ ಗಲಾಟೆಯಾಗಿತ್ತು. ಇದನ್ನೂ ಓದಿ: ಪಾರ್ಟಿ ಮಾಡಲು ಹೋದ ಮೂವರು ಯುವಕರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಸಾವುಆರೋಪಿ ಹಾಗೂ ಹತ್ಯೆಯಾದ ಇಬ್ಬರೂ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಪಾನ್ ಶಾಪ್ ಬಳಿ ನಿಂತಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಜಗಳ ತಾರಕಕ್ಕೇರಿ ಅಜಯ್ ಮಂಜುನಾಥ್ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕಿ ಹತ್ಯೆ ನಡೆಸಿದ್ದಾನೆ. ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.ಘಟನೆ ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಅಜಯ್‌ನನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಹೆಲ್ತ್‌ಬುಲೆಟಿನ್- ದ್ರವಾಹಾರ ಸೇವಿಸ್ತಿದ್ದು, ಭಕ್ತರಿಗೆ ಆತಂಕ ಬೇಡ
Sign in to your account
Username or Email Address


Password

 Remember Me


