ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ಆಕಳು ಕರುವಿನ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ ಪೊಲೀಸರ ಅತಿಥಿಯಾಗಿದ್ದಾನೆ. ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಇಮ್ತಿಯಾಜ್‍ನನ್ನ ಲಿಂಗಸುಗೂರು ಠಾಣೆ (Police Station Lingasugur) ಪೊಲೀಸರು ಬಂಧಿಸಿದ್ದಾರೆ.ವೃತ್ತಿಯಲ್ಲಿ ಆಟೋ ಡ್ರೈವರ್ (Auto Driver) ಆಗಿದ್ದ ಆರೋಪಿ ಇಮ್ತಿಯಾಜ್, ಅಮರೇಶ್ ಎಂಬವರಿಗೆ ಸೇರಿದ್ದ ಆಕಳ ಕರು ಮೇಲೆ ಅತ್ಯಾಚಾರವೆಸಗಿದ್ದಾನೆ. ಯಾವಾಗಲು ತೋಟದ ಮನೆಯಲ್ಲೇ ಮಲಗುತ್ತಿದ್ದ ಆರೋಪಿ, ಯಾರೂ ಇಲ್ಲದ ವೇಳೆ ಕರುವಿನ ಕಾಲು ಕಟ್ಟಿ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಪ್ರೀತಿಗೆ ಅಡ್ಡಿಪಡಿಸಿದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 17ರ ಹುಡುಗಿಕಸಬಾ ಲಿಂಗಸುಗೂರು ಗ್ರಾಮದ ನಿವಾಸಿ ಅಮರೇಶ್ 7-8 ಆಕಳು ಸಾಕಾಣಿಕೆ ಮಾಡುತ್ತಿದ್ದಾನೆ. ಕೊಟ್ಟಿಗೆಯಲ್ಲಿ ಆಕಳು ಕಟ್ಟಿ ಮನೆಗೆ ಹೋದಾಗ ಘಟನೆ ನಡೆದಿದೆ. ಇಮ್ತಿಯಾಜ್ ನ ಕೃತ್ಯ ಕಣ್ಣಾರೆ ಕಂಡ ಅಮರೇಶ ಆರೋಪಿಯನ್ನ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sign in to your account
Username or Email Address


Password

 Remember Me


