ಬಿಗ್ ಬಾಸ್ ಮನೆಯಲ್ಲಿ (Bigg Boss House) ಪ್ರೇಮ ಪಕ್ಷಿಗಳಾಗಿ (Love Birds) ಸಾನ್ಯ, ರೂಪೇಶ್ ಶೆಟ್ಟಿ (Roopesh Shetty) ಹೈಲೈಟ್ ಆಗಿದ್ದರು. ಇದೀಗ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಶೆಟ್ಟಿ ಗೆಲುವಿಗೆ ಸಾನ್ಯ (Sanya Iyer) ಸಂಭ್ರಮಿಸಿದ್ದಾರೆ. ಹೊಸ ವರ್ಷಕ್ಕೆ ರೂಪೇಶ್ ಜೊತೆಗಿನ ಮೊದಲ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ.ಒಟಿಟಿಯಿಂದ ಪರಿಚಿತರಾದ ರೂಪೇಶ್ ಮತ್ತು ಸಾನ್ಯ, ಟಿವಿ ಬಿಗ್ ಬಾಸ್‌ನಲ್ಲೂ ಜೊತೆಯಾಗಿದ್ದರು. ಸಾನ್ಯ ಎಲಿಮಿನೇಷನ್ (Elimination) ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟರ ಮಟ್ಟಿಗೆ ಇಬ್ಬರ ಫ್ರೆಂಡ್‌ಶಿಪ್ ಗಾಢವಾಗಿತ್ತು. ಈಗ ಬಿಗ್ ಬಾಸ್ ವಿನ್ನರ್ ಆಗಿ, ಟ್ರೋಫಿ ಮತ್ತು 60 ಲಕ್ಷ ರೂಪಾಯಿ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಸಾನ್ಯ ಫೋಟೋ ಶೇರ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.  A post shared by _gusgrace_ / ಸಾನ್ಯ ಅಯ್ಯರ್ (@saanyaiyer__official)ಪಿಕ್ಚರ್ ಬ್ಲರ್ ಆಗಿದೆ ಆದರೆ ಖುಷಿ ನೂರಾಗಿದೆ. ಹೊಸ ವರ್ಷ ಬೆಸ್ಟ್ ಆಗಿ ಶುರುವಾಗಿದೆ. ನನ್ನ ಬೆಸ್ಟ್ ಫ್ರೆಂಡ್ ಬಿಗ್ ಬಾಸ್ (Bigg Boss) ಗೆದ್ದಿದ್ದಾರೆ ಎಂದು ಸಾನ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಗೆಲುವಿನ ನಂತರ ತೆಗೆದ ತಮ್ಮ ಮೊದಲ ಫೋಟೋವನ್ನು ಸಾನ್ಯ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿಇನ್ನೂ ನಟಿಯ ಪೋಸ್ಟ್ ನೋಡಿರುವ ನೆಟ್ಟಿಗರು, ಬೆಸ್ಟ್ ಜೋಡಿ, ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದಾರೆ.
Sign in to your account
Username or Email Address


Password

 Remember Me


