ಬಿಗ್ ಬಾಸ್ ಮನೆಯಲ್ಲಿ (Bigg Boss House) ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ (Roopesh Rajanna) ಎಂಟ್ರಿ ಕೊಟ್ಟಿದ್ದರು. ಇದೀಗ ನಾಲ್ಕನೇ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ. ಈ ವೇಳೆ ರೂಪೇಶ್ ರಾಜಣ್ಣ ಬಗ್ಗೆಯೊಂದು ಚರ್ಚೆಯಾಗಿದೆ. ರಾಜಣ್ಣ ಮನೆಯಲ್ಲಿ ಹೇಗೆ ಇರುತ್ತಾರೆ ಎಂದು ಸುದೀಪ್ (Sudeep), ರಾಜಣ್ಣ ಪತ್ನಿಗೆ ಕೇಳಿದ್ದಾರೆ. ಈ ವೇಳೆ ರಾಜಣ್ಣನ ಅವರ ಪತ್ನಿಯ ಮಾತಿಗೆ ಕಿಚ್ಚ ಶಾಕ್ ಆಗಿದ್ದಾರೆ.ದೊಡ್ಮನೆಯಲ್ಲಿ ನವೀನ ಪೈಕಿ ಒಬ್ಬರಾಗಿ ಎಂಟ್ರಿ ಕೊಟ್ಟಿದ್ದು ರೂಪೇಶ್ ರಾಜಣ್ಣ, ರಿಯಾಲಿಟಿ ಶೋ ಬಗ್ಗೆ ಏನು ಅನುಭವವಿಲ್ಲದ ಮತ್ತು ಬಣ್ಣದ ಲೋಕದ ಹಿನ್ನೆಲೆ ಇಲ್ಲದ ವ್ಯಕ್ತಿ ರಾಜಣ್ಣ ಇತರೆ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ಕೊಟ್ಟು ಬಿಗ್ ಬಾಸ್ ಟಾಪ್ 5 ಫೈನಲಿಸ್ಟ್ ಆಗಿದ್ದರು. ಇನ್ನೂ ಗ್ರ್ಯಾಂಡ್ ಫಿನಾಲೆಯ ವೇಳೆ ಮನೆಮಂದಿಗೆ ಕಿಚ್ಚ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಮನೆಯಲ್ಲಿ ಎಲ್ಲರ ಮಾತನ್ನ ಕೇಳಿಸಿಕೊಳ್ಳದೇ ಇರೋದು ಯಾರು ಎಂದಿದ್ದಾರೆ.ಆಗ ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರೂ ರಾಜಣ್ಣ ಅವರ ಹೆಸರನ್ನ ಹೇಳಿದ್ದಾರೆ. ಅವರಿಗೆ ತಾಳ್ಮೆ ಕಮ್ಮಿ ಮಾತು ಜಾಸ್ತಿ ಎಂದಿದ್ದಾರೆ. ಇದೇ ಪ್ರಶ್ನೆ ರಾಜಣ್ಣ ಪತ್ನಿಗೆ ಕೇಳಿದ್ದಾರೆ. ಮನೆಯಲ್ಲೂ ಅವರು ಹೀಗೆ ನಾ, ನಿಮ್ಮ ಮಾತು ಕೇಳಿಸಿಕೊಳ್ತಾರಾ ಎಂದು ಸುದೀಪ್ ಕೇಳಿದ್ದಾರೆ. ಇದನ್ನೂ ಓದಿ: ರೂಪೇಶ್‌ ಶೆಟ್ಟಿ ಗೆಲುವನ್ನ ಸಂಭ್ರಮಿಸಿದ ಸಾನ್ಯ ಅಯ್ಯರ್ಪಾಪ ಮುಗ್ಧರು ಸರ್ ಅವರು, ಅಮಾಯಕರು ಎಂದು ರಾಜಣ್ಣ ಪತ್ನಿ ಹೇಳಿದ್ದಾರೆ. ನನಗೆ ಅವರು ಎನು ಎಂಬುದು ಚೆನ್ನಾಗಿ ಅರ್ಥ ಆಗಿದೆ. ಅವರ ರೂಟಿಗೆ ನಾನು ಹೊರಟು ಹೋಗ್ತೀನಿ. ಅವರು ತುಂಬಾ ಒಳ್ಳೆಯ ಮನುಷ್ಯ, ಆದರೆ ಹೇಳೋದನ್ನ ಕೇಳಿಸಿಕೊಳ್ಳುವ ಗುಣ ಕಮ್ಮಿ ಎಂದು ಮಾತನಾಡಿದ್ದಾರೆ. ರಾಜಣ್ಣನ ಪತ್ನಿಯ ಮಾತಿಗೆ ಸುದೀಪ್ ಶಾಕ್ ಆಗಿದ್ದಾರೆ.
Sign in to your account
Username or Email Address


Password

 Remember Me


