ಬಿಗ್ ಬಾಸ್ ಆಟಕ್ಕೆ (Bigg Boss) ತೆರೆ ಬಿದ್ದಿದೆ. 100 ದಿನಗಳ ದೊಡ್ಮನೆ ಆಟ ಪೂರ್ಣಗೊಳಿಸಿ, ಕರಾವಳಿ ಕುವರ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಇದೀಗ ತಮ್ಮ ಗೆಲುವನ್ನ ಅಭಿಮಾನಿಗಳಿಗೆ ರೂಪೇಶ್ ಶೆಟ್ಟಿ (Roopesh Shetty) ಅರ್ಪಿಸಿದ್ದಾರೆ. ಗೆದ್ದ ನಂತರ ರೂಪೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ ಎಂದು ರೂಪೇಶ್ ಮಾತನಾಡಿದ್ದಾರೆ.ಒಟಿಟಿ ಮತ್ತು ಟಿವಿ ಬಿಗ್ ಬಾಸ್ (Bigg Boss) 142 ದಿನಗಳ ಆಟದಲ್ಲಿ ರೂಪೇಶ್ ಶೆಟ್ಟಿ (Roopesh Shetty) ವಿಜೇತರಾಗಿದ್ದಾರೆ. ಒಟಿಟಿಯಲ್ಲೂ ಟಾಪರ್ ಆಗಿದ್ದ ರೂಪೇಶ್ ಈಗ ಬಿಗ್ ಬಾಸ್‌ನಲ್ಲೂ ವಿನ್ನರ್ ಪಟ್ಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್‌ ಅಡಿಗಗೆ ಸೆಡ್ಡು ಹೊಡೆದು ಬಿಗ್‌ ಬಾಸ್‌ ಟ್ರೋಫಿ ಗೆದ್ದಿದ್ದಾರೆ.ನಾನು ಕೊನೆಗೂ ವಿನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಹೇಗೆ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ. ಬಿಗ್ ಬಾಸ್ ಒಟಿಟಿ ಸೀಸನ್‌ನಿಂದ ಇಲ್ಲಿಯ ತನಕ 142 ದಿನಗಳ ಜರ್ನಿ ಎಂದರೆ ಸುಲಭ ಅಲ್ಲ. ನನಗೆ ಸಪೋರ್ಟ್ ಮಾಡಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್. ಈ ಪಯಣದಲ್ಲಿ ಏಳು-ಬೀಳುಗಳು ಇದ್ದವು. ಪ್ರತಿ ಕ್ಷಣದಲ್ಲೂ ನೀವೆಲ್ಲರೂ ನನ್ನ ಬೆಂಬಲಕ್ಕೆ ನಿಂತಿದ್ರಿ ಎಂದು ವೋಟ್ ಮಾಡಿದ ಎಲ್ಲರಿಗೂ ರೂಪೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ನಾನು ಗೆದ್ದಿಲ್ಲ, ನೀವು ನನ್ನನ್ನು ಗೆಲ್ಲಿಸಿದ್ದೀರಿ ಎಂದು ಹೇಳಿದ್ದಾರೆ.ಜನರ ವೋಟ್‌ನಿಂದ (Vote) ನನಗೆ ಆತ್ಮವಿಶ್ವಾಸ ಸಿಕ್ತು. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರಿಗೂ ಇನ್ನೂ ಹೆಮ್ಮೆ ಆಗುವಂತೆ ಮಾಡುತ್ತೇನೆ. ನಾನು ಗೆದ್ದಿರುವುದಲ್ಲ, ನೀವು ಗೆಲ್ಲಿಸಿರುವುದು. ಈ ಗೆಲುವು ನಿಮ್ಮಿಂದ. ನಿಮ್ಮ ಪ್ರೀತಿಗೆ ಬರೀ ಮಾತುಗಳಲ್ಲಿ ಥ್ಯಾಂಕ್ಸ್ ಹೇಳಿದರೆ ಕಡಿಮೆ. ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿ ಯಾವಾಗಲೂ ಇರುತ್ತದೆ ಎಂದಿದ್ದಾರೆ ರೂಪೇಶ್ ಶೆಟ್ಟಿ. ಇದನ್ನೂ ಓದಿ: ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್ಬಿಗ್ ಬಾಸ್ ವೇದಿಕೆಗೆ ಧನ್ಯವಾದಗಳು. ಸುದೀಪ್ (Sudeep) ಮತ್ತು ಪರಮೇಶ್ವರ್ ಗುಂಡ್ಕಲ್ ಅವರಿಗೆ ಥ್ಯಾಂಕ್ಸ್ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಆಕರ್ಷಕ ಟ್ರೋಫಿ ಜೊತೆಗೆ 60 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.Live Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


