ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್‌ವೊಂದು (Container) ಡಿವೈಡರ್‌ಗೆ (Divider) ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಹಾಸನ (Hassan) ನಗರದ ಭಗತ್‌ ಸಿಂಗ್‌ ಸರ್ಕಲ್‌ನಲ್ಲಿ ನಡೆದಿದೆ.ನಗರದ ಎನ್.ಆರ್. ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ಹೋಗುತ್ತಿದ್ದ ಕಂಟೇನರ್ ಭಗತ್‌‌ಸಿಂಗ್ ಸರ್ಕಲ್‌ನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.‌ ಈ ಕಂಟೇನರ್‌ ಪಲ್ಟಿ ಆಗಿದೆ. ಈ ರಭಸಕ್ಕೆ ಕಂಟೇನರ್‌ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್‌ ಚಾಲಕ (Driver) ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ-ಪುಟ್ಟ ಗಾಯಗಳಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಮುಗಿಸಿ ವಾಪಸ್ಸಾಗ್ತಿದ್ದಾಗ KSRTC ಬಸ್‌ಗೆ ಕಾರು ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವುಘಟನೆಗೆ ಸಂಬಂಧಿಸಿ ಚಾಲಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಂಟೇನರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರಿಗೆ ಒತ್ತಾಯ- 2 ಗುಂಪುಗಳ ನಡುವೆ ಮಾರಾಮಾರಿ
Sign in to your account
Username or Email Address


Password

 Remember Me


