ಕಿರುತೆರೆಯ ಲವ್ ಬರ್ಡ್ಸ್ ಸಿದ್ದು ಮೂಲಿಮನಿ(Siddumoolimani) ಮತ್ತು ಪ್ರಿಯಾ ಆಚಾರ್ (Priya Achar) ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದರು. ಹೊಸ ವರ್ಷದ ಸಂಭ್ರಮದ ವೇಳೆ ಪ್ರಿಯಾಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.  A post shared by Priya j achar???? (@priya_j_achar)ಟಿವಿ ಪರದೆಯ ಕ್ಯೂಟ್ ಜೋಡಿ ಪ್ರಿಯಾ ಮತ್ತು ಸಿದ್ದು, ಹೊಸ ವರ್ಷದ ಶುಭಾರಂಭ ಕಾರ್ಯಕ್ರಮದಲ್ಲಿ ತಮ್ಮ ಲವ್ ಸ್ಟೋರಿ ಹೇಳಿಕೊಳ್ಳುವುದರ ಮೂಲಕ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇನ್ನೂ ಈ ವೇಳೆ ಪ್ರೀತಿ ಮತ್ತು ಮದುವೆ ವಿಚಾರ ಮಾತನಾಡಿದರೆ ಮಾತ್ರ ನನಗೆ ತುಂಬಾ ಸಂಕೋಚ ನಾಚಿಕೆ ಆಗುತ್ತದೆ. ನನಗೆ ಸ್ಟೇಜ್ ಭಯ ಇಲ್ವೇ ಇಲ್ಲ. ಆದರೆ ಆ ವಿಷಯ ಯಾರಾದರೂ ಕೇಳಿದರೆ ನಾಚಿಕೆ ಆಗುತ್ತೆ. ನಾವು ಡಿಕೆಡಿ ರಿಯಾಲಿಟಿ ಶೋ ಮೂಲಕ ಸ್ನೇಹಿತರಾಗಿದ್ವೀ ಪ್ರೀತಿ ಶುರುವಾಗಿದ್ದು ನಮ್ಮ ʻಧಮಾಕʼ ಶೂಟ್‌ನಲ್ಲಿ ಎಂದು ಪ್ರಿಯಾ ಮಾತನಾಡಿದ್ದಾರೆ.ನಮ್ಮ ಮನದ ಮೂರು ಮುಖ್ಯ ಪದಗಳನ್ನು ಹೇಳುವ ಸಮಯ, ಅದನ್ನ ನಾನೇ ಹೇಳುವೆ. ಬಿಡು ನೀ ಭಯವ ನನಗೆ ಅರ್ಥ ಆಗುತ್ತೆ. ಇದು ಹೃದಯ ವಿಷಯ, ಪ್ರೀತಿ ಅಂತ ಹೆಸರಿಡಲು. ನನ್ನ ಹುಡುಗಿ ಎಂದು ಕರೆಯಲು ಇಲ್ಲಸಲ್ಲದ ಮಾತಾಡಲು ನಾನಲ್ಲ ಮಾಮೂಲು ಪ್ರೇಮಿ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿಈ ಸಂಬಂಧಕ್ಕೆ ನಾವು ಹೆಸರಿಟ್ಟಿಲ್ಲ. ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಲ್ಲ ಪ್ರೀತಿ ಅನ್ನೋ ವಿಚಾರ ಹೇಳಿಕೊಂಡಿಲ್ಲ ಮನಸ್ಸಿನಲ್ಲಿ ಮಾತ್ರ ಮದ್ವೆ ಅನ್ನೋ ವಿಚಾರವಿತ್ತು. ನಮ್ಮ ಭಾವನೆಗಳು ಮನೆಯಲ್ಲಿ ಸುಲಭವಾಗಿ ಗೊತ್ತಾಯಿತು. ಆಗ ಮದುವೆ ಮಾತುಕತೆ ಶುರುವಾಯ್ತು. ಆಗ ಬರೆದ ಕವಿತೆ ಕೊನೆ ಸಾಲುಗಳನ್ನು ಈಗ ಹೇಳುವೆ. ಚಂದನೆಯ ಅರಸಿ ನೀನು. ನಾನು ನಿನ್ನ ಜನುಮ ಜನುಮದ ಸಾಮಿ ನಿನ್ನನ್ನು ಪ್ರೀತಿಸುವೆ..ಮದುವೆ ಆಗುವೆಯಾ? ಎಂದು ಮಂಡಿಯೂರಿ ಸಿದ್ದು ಪ್ರಪೋಸ್ ಮಾಡುತ್ತಾರೆ. ಬಳಿಕ ಮತ್ತೆ ಕಾಲ್ಗೆಜ್ಜೆ ತೊಡಿಸಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.
Sign in to your account
Username or Email Address


Password

 Remember Me


