ರಾಮನಗರ: ಹೊಸ ವರ್ಷಾಚರಣೆ (New Year) ಹಾಗೂ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಬೆಂಗಳೂರು (Bengaluru)-ಮೈಸೂರು (Mysuru) ದಶಪಥ ಹೆದ್ದಾರಿಯ ಬೈಪಾಸ್‌ಗಳಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಇರಲಿದೆ.ಬಿಡದಿ (Bidadi), ರಾಮನಗರ (Ramanagar) ಹಾಗೂ ಚನ್ನಪಟ್ಟಣ (Channapatna) ಬೈಪಾಸ್‌ಗಳಲ್ಲಿ (Bypass) ಇಂದು ಸಂಜೆ 5.30ರಿಂದ ನಾಳೆ ಬೆಳಿಗ್ಗೆ 4.30ರವರೆಗೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಅಂತೆಯೇ ಕುಂಬಳಗೋಡು ಫ್ಲೈ ಓವರ್ ಕೂಡಾ ಇಂದು ರಾತ್ರಿ 8 ರಿಂದ ಭಾನುವಾರ ಬೆಳಿಗ್ಗೆ 4:30ರವರೆಗೆ ಬಂದ್ ಆಗಿರಲಿದೆ. ಹಳೇ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಪಾಘಾತ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರ ಪೊಲೀಸರು ಕ್ರಮವಹಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿ – ಬುಲ್ಡೋಜರ್ ಬಳಸಿ ಅಮೀರ್ ಖಾನ್ ಮನೆ ಕಾಂಪೌಂಡ್ ಧ್ವಂಸಅಲ್ಲದೇ ಜಿಲ್ಲಾದ್ಯಂತ ರಾತ್ರಿ 12:30ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದ್ದು, ಸಂಭ್ರಮಾಚರಣೆ ನೆಪದಲ್ಲಿ ಪುಂಡಾಟಿಕೆ ಮಾಡಿದರೆ ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ರಾತ್ರಿ ಇಡೀ ಡ್ರಿಂಕ್ ಡ್ರೈವ್ ಬಗ್ಗೆ ನಿಗಾ ವಹಿಸಿ, ತೀವ್ರ ತಪಾಸಣೆ ನಡೆಸಲಾಗುವುದು ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ:  ಮೃತಪಟ್ಟಿದ್ದಾಳೆಂದು ಭಾವಿಸಿದ್ದ ಪತ್ನಿಯನ್ನು 9 ವರ್ಷಗಳ ಬಳಿಕ ಕಂಡು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಪತಿ
Sign in to your account
Username or Email Address


Password

 Remember Me


