ಬೆಂಗಳೂರು: ಇಡೀ ವಿಶ್ವವೇ ಹೊಸ ವರ್ಷವನ್ನು (New Year) ಸಂಭ್ರಮದಿಂದ ಭರ ಮಾಡಿಕೊಂಡಿದೆ. ಸಂಭ್ರಮಾಚರಣೆಯಲ್ಲಿ ಗುಂಡು-ತುಂಡಿನ ಪಾರ್ಟಿ ಕಾಮನ್. ಈ ವೇಳೆ ಕೋರಮಂಗಲದಲ್ಲಿ (Koramangala) ಕುಡಿದು ಬಿದ್ದಿದ್ದ ಮಹಿಳೆಯನ್ನು (Woman) ಪೊಲೀಸರು (Police) ರಕ್ಷಿಸಿದ್ದಾರೆ.ಹೊಸ ವರ್ಷ ಆಚರಣೆಯ ಮೂಡ್‌ನಲ್ಲಿ ಜನರು ತೇಲಾಡುತ್ತಿದ್ದು, ಇವರನ್ನೆಲ್ಲ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ಗುಂಪುಗಳನ್ನು ಚದುರಿಸುತ್ತಿದ್ದರೂ, ಮತ್ತೆ ಗುಂಪುಗೂಡಿ ಹುಚ್ಚೆದ್ದು ಜನರು ಕುಣಿಯುತ್ತಿದ್ದಾರೆ. ಈ ವೇಳೆ ಮಹಿಳೆಯೊಬ್ಬಳು ಕಂಠ ಪೂರ್ತಿ ಕುಡಿದು ನಡುರಸ್ತೆಯಲ್ಲಿ ಬಿದ್ದಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಗಲಾಟೆ- ಕಿಡಿಗೇಡಿಗಳು ಪೊಲೀಸರ ವಶಕ್ಕೆಇನ್ನೂ ಕಂಡ ಕಂಡಲ್ಲಿ ತೂರಾಡಿ ರಸ್ತೆ ಮೇಲೆ ಕೆಲ ಯುವತಿಯರು ಬಿದ್ದಿದ್ದಾರೆ. ಅವರನ್ನು ರಾಣಿ ಚೆನ್ನಮ್ಮ ಪಡೆಯವರು (ಮಹಿಳಾ ಪೊಲೀಸ್) ರಕ್ಷಣೆ ಮಾಡಿದ್ದಾರೆ. ನಂತರ ಅವರನ್ನು ಪೊಲೀಸರು ಸಹಾಯವಾಣಿ ಕೇಂದ್ರಕ್ಕೆ ಶಿಫ್ಟ್‌ ಮಾಡಿದ್ದಾರೆ. ಸಂಭ್ರಮಾಚರಣೆ ಸಂದರ್ಭದಲ್ಲಿ ಕಿರಿಕ್‌ ಮಾಡುತ್ತಿದ್ದ ಪುಂಡರಿಗೆ ಪೊಲೀಸರು ಲಾಠಿ ರುಚಿಯನ್ನು ತೋರಿಸಿದ್ದಾರೆ.ಬೆಂಗಳೂರಿನ ಮುಖ್ಯರಸ್ತೆಗಳಲ್ಲಿ ಸಂಭ್ರಮಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಕಾಲಾವಕಾಶ ನೀಡಲಾಗಿತ್ತು. ಸಮಯದ ಅವಧಿ ಮುಗಿಯುತ್ತಿದ್ದಂತೆ ರಸ್ತೆಯನ್ನು ಪೊಲೀಸರು ಖಾಲಿ ಮಾಡಿಸಿದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಬಿಂದಾಸ್‌ ವೆಲ್‌ಕಮ್‌ – ಎಲ್ಲೆಲ್ಲೂ ಸಂಭ್ರಮ, ಸಡಗರ
Sign in to your account
Username or Email Address


Password

 Remember Me


